ನವದೆಹಲಿ: ನಾಗಾಲ್ಯಾಂಡ್ಗೆ ಕೇಂದ್ರ ಸರ್ಕಾರದ ಸಂವಾದಕರಾಗಿರುವ ಆರ್ಎನ್ ರವಿ ಅವರನ್ನು, ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಎನ್ಎಸ್ಎ ಅಜಿತ್ ದೋವಲ್ ಅವರಿಗೆ ರವಿ ಮೂರನೇ ಉಪ ಸಲಹೆಗಾರರಾಗಿದ್ದು, ಈಗಾಗಲೇ ರಾಜೇಂದ್ರ ಖನ್ನಾ ಹಾಗೂ ಪಂಕಜ್ ಸರನ್ ಉಪ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರ್ಎನ್ ರವಿ ಅವರು, ನಾಗಾ ಬಂಡುಕೋರರೊಂದಿಗೆ ಶಾಂತಿ ಸಂದಾನ ನಡೆಸುವ ಕೇಂದ್ರದ ಪ್ರತಿನಿಧಿಯಾಗಿದ್ದಾರೆ. ಈ ಕಾರ್ಯವನ್ನು ಅವರು ಮುಂದೆಯೂ ಮುಂದುವರೆಸಲಿದ್ದಾರೆ.
ಇಂಟೆಲಿಜೆನ್ಸ್ ಬ್ಯುರೋ(ಐಬಿ)ಯ ವಿಶೇಷ ನಿರ್ದೇಶಕರಾಗಿದ್ದ ರವಿ ಅವರನ್ನು ಎನ್ಡಿಎ ಸರ್ಕಾರ ‘ಜಾಯಿಂಟ್ ಇಂಟೆಲಿಜೆನ್ಸ್ ಕಮಿಟಿ’ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಇದು ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಸೆಕ್ರೆಟರಿಯೇಟ್ನ ಅಂಗಸಂಸ್ಥೆಯಾಗಿದೆ. ಇದೀಗ ಅವರನ್ನು ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರರನ್ನಾಗಿ ಭರ್ತಿ ಮಾಡಲಾಗಿದೆ.
source; Hindutantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.