ನವದೆಹಲಿ: ಯಾವೊಬ್ಬ ಮತದಾರನೂ ಮತದಾನದಿಂದ ಹಿಂದೆ ಉಳಿಯಬಾರದು ಎಂಬ ಗುರಿಯಿಟ್ಟುಕೊಂಡಿರುವ ಚುನಾವಣಾ ಆಯೋಗ, ದಿವ್ಯಾಂಗ ಮತದಾರರಿಗಾಗಿ ಹೊಸ ಸೇವೆಯನ್ನು ಆರಂಭಿಸಲು ಮುಂದಾಗಿದೆ.
ಚುನಾವಣೆಯ ದಿನ ಮತಗಟ್ಟೆಗೆ ದಿವ್ಯಾಂಗರನ್ನು ಪಿಕ್ ಆಂಡ್ ಡ್ರಾಪ್ ಮಾಡಲು ಚುನಾವಣಾ ಯೋಗ ನಿರ್ಧರಿಸಿದೆ. ಚುನಾವಣಾ ಸಿಬ್ಬಂದಿಗಳೇ ಈ ಕಾರ್ಯವನ್ನು ಮಾಡಲಿದ್ದಾರೆ.
ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಅಧಿಕಾರಿಗಳಿಗೆ ಈ ಬಗ್ಗೆ ರಾಷ್ಟ್ರೀಯ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದ್ದು, ದಿವ್ಯಾಂಗರಿಗೆ ಅವರ ಮನೆಯಿಂದ ಮತಗಟ್ಟೆಗೆ ಪಿಕ್ ಆಂಡ್ ಡ್ರಾಪ್ ಮಾಡುವ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು ಸೂಚಿಸಿದೆ.
ಇದಕ್ಕಾಗಿ ಸರ್ಕಾರದ ವಾಹನಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.