ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಗುರುವಾರ ರೂ.2.50 ಕಡಿತಗೊಳಿಸಿದ್ದು, ರಾಜ್ಯ ಸರ್ಕಾರಗಳೂ ವ್ಯಾಟ್ ತಗ್ಗಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಇದರ ಪರಿಣಾಮವಾಗಿ ಬಿಜೆಪಿ ಆಡಳಿತವಿರುವ 12 ರಾಜ್ಯಗಳು ತೈಲ ಬೆಲೆಗಳ ವ್ಯಾಟ್ನ್ನು ಕುಗ್ಗಿಸಿವೆ.
ಉತ್ತರಪ್ರದೇಶ, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಛತ್ತೀಸ್ಗಢ ಸೇರಿದಂತೆ 12 ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಪ್ರತಿ ಲೀಟರ್ಗೆ ರೂ.5ರಷ್ಟು ಕಡಿತವಾಗಿದೆ. ಮಹಾರಾಷ್ಟ್ರ ಪೆಟ್ರೋಲ್ ಬೆಲೆಯಲ್ಲಿ ರೂ.3.2ರಷ್ಟು ಕಡಿತ ಮಾಡಿ ಘೋಷಣೆ ಹೊರಡಿಸಿದೆ, ಆದರೆ ಡಿಸೇಲ್ ದರವನ್ನು ಹಾಗೆಯೇ ಇಟ್ಟಿದೆ.
ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ, ಅಸ್ಸಾಂ, ಜಾರ್ಖಾಂಡ್, ತ್ರಿಪುರ, ಗೋವಾ, ಉತ್ತರಾಖಂಡಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಲೀಟರ್ಗೆ ರೂ.5 ಕಡಿತವಾಗಿದೆ.
ಬಿಹಾರ, ಒರಿಸ್ಸಾ, ಪಂಜಾಬ್ ರಾಜ್ಯಗಳು ಬೆಲೆ ಇಳಿಕೆಯ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ. ಪಶ್ಚಿಮಬಂಗಾಳ ಕೇಂದ್ರ ಸರ್ಕಾರ ಲೀಟರ್ಗೆ 10 ರೂಪಾಯಿ ತಗ್ಗಿಸಲಿ ಎಂದಿದೆ. ಇನ್ನೊಂದೆಡೆ ಕೇರಳ ಮತ್ತು ಕರ್ನಾಟಕ ಕೇಂದ್ರದ ಮನವಿಯನ್ನು ತಿರಸ್ಕರಿಸಿದ್ದು, ವ್ಯಾಟ್ ತಗ್ಗಿಸಲ್ಲ ಎಂದಿದೆ.
source; Timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.