ನವದೆಹಲಿ: ದೇಶದ ಮೊತ್ತ ಮೊದಲ ಮಲ್ಟಿ ಸ್ಕಿಲ್ ಪಾರ್ಕ್ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಭಾರತ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಡುವೆ 150 ಮಿಲಿಯನ್ ಡಾಲರ್ ಸಾಲ ಒಪ್ಪಂದ ನಡೆದಿದೆ.
ಹೆಚ್ಚು ಹೆಚ್ಚು ಕೌಶಲ್ಯಭರಿತ ಕಾರ್ಯಪಡೆಯನ್ನು ಸೃಷ್ಟಿಸುವ ಸದುದ್ದೇಶದೊಂದಿಗೆ ಮೊತ್ತ ಮೊದಲ ಸ್ಕಿಲ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ.
ಗ್ಲೋಬಲ್ ಸ್ಕಿಲ್ ಪಾರ್ಕ್ (ಜಿಎಸ್ಪಿ) ಭೋಪಾಲ್ನಲ್ಲಿ ತಲೆ ಎತ್ತಲಿದ್ದು, ತಾಂತ್ರಿಕ, ವೃತ್ತಿಪರ ಶಿಕ್ಷಣ ಮತ್ತು ತರಬೇತಿಗಳ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ ಸ್ಥಾಪನೆಯಾಗುತ್ತಿದೆ.
ಈ ಸ್ಕಿಲ್ ಪಾರ್ಕ್ನ ಆವರಣದಲ್ಲಿ ವ್ಯಾವಹಾರಿಕ ಕೌಶಲ್ಯ ಸ್ವಾಧೀನ ಕೇಂದ್ರ, ಸುಧಾರಿತ ಕೃಷಿ ತರಬೇತಿ ಕೇಂದ್ರ, ಉದ್ಯಮಶೀಲತೆ ಉತ್ತೇಜಿಸುವ ಸೇವೆ, ತರಬೇತಿ, ಕೌಶಲ್ಯ ಆಧಾರಿತ ಸಂಶೋಧನೆ ಮುಂತಾದ ಆಧುನಿಕ ತರಬೇತಿ ಸಂಸ್ಥೆಗಳಿರಲಿದೆ ಎಂದು ವಿತ್ತ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಉತ್ಪಾದನಾ, ಸೇವಾ ಮತ್ತು ಕೃಷಿ ಉದ್ಯೋಗಗಳ ಕೌಶಲ್ಯ ತರಬೇತಿಯನ್ನು ಇದು ಹೊಂದಲಿದ್ದು, ಸುಮಾರು 20 ಸಾವಿರ ಜನರಿಗೆ ಇದರಿಂದ ಪ್ರಯೋಜನ ಸಿಗಲಿದೆ ಎಂಬ ನಿರೀಕ್ಷೆ ಇದೆ.
source : ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.