ಲಕ್ನೋ: ಉತ್ತರಪ್ರದೇಶದ ಬಗ್ಪಾತ್ ಜಿಲ್ಲೆಯ 13 ಸದಸ್ಯರನ್ನೊಳಗೊಂಡ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ.
ಮಂಗಳವಾರ ಹವನ ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಇವರು ಹಿಂದೂ ಧರ್ಮಕ್ಕೆ ಆಗಮಿಸಿದ್ದಾರೆ ಮತ್ತು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಾರೆ. ಯುವ ಹಿಂದೂ-ವಾಹಿನಿ ಭಾರತ್ ಸಂಘಟನೆಯ ನೇತೃತ್ವದಲ್ಲಿ ಮತಾಂತರ ಪ್ರಕ್ರಿಯೆ ಜರುಗಿದೆ.
ಈ ಕುಟುಂಬದ ಸದಸ್ಯರೊಬ್ಬರು ಅಸುನೀಗಿದ್ದು, ಇದು ಕೊಲೆ ಎಂದು ಕುಟುಂಬ ವಾದಿಸುತ್ತಿದೆ. ಆದರೆ ಮುಸ್ಲಿಂ ಸಮುದಾಯದವರಾಗಲಿ, ಪೊಲೀಸರಾಗಲಿ ಯಾರೊಬ್ಬರೂ ಇವರಿಗೆ ಬೆಂಬಲಿಸಲು ಮುಂದಾಗಿಲ್ಲ ಇದೇ ಕಾರಣದಿಂದ ಬೇಸರಗೊಂಡು ಮತಾಂತರವಾಗಲು ಈ ಕುಟುಂಬ ನಿರ್ಧರಿಸಿತು ಎನ್ನಲಾಗಿದೆ.
ಸ್ವಇಚ್ಛೆಯಿಂದಲೇ ಮತಾಂತರವಾಗಲು ಬಯಸುತ್ತಿದ್ದೇವೆ ಎಂದು ಈ ಕುಟುಂಬ ಅಫಿಡವಿಟ್ ಸಲ್ಲಿಕೆ ಮಾಡಿದೆ.
ಮತಾಂತರವಾದ ಬಳಿಕವಾದರೂ ತಮಗೆ ನ್ಯಾಯಸಿಗಬಹುದು ಎಂಬ ನಿರೀಕ್ಷೆಯಲ್ಲಿ ಈ ಕುಟುಂಬ ಇದೆ. ಕುಟುಂಬಕ್ಕೆ ಪ್ರಕರಣದಲ್ಲಿ ಬೆಂಬಲ ನೀಡುವುದಾಗಿ ಹಿಂದೂ-ವಾಹಿನಿ ಭಾರತ್ ಸಂಘಟನೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.