ಪಾಲಂಪುರ(ಹಿ.ಪ್ರ): ಭಾರತ ಮತ್ತು ಪಾಕಿಸ್ಥಾನ ನಡುವಿನ ಸಭೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಈ ನಡೆಯನ್ನು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ತಂದೆ ಎನ್.ಕೆ ಕಾಲಿಯಾ ಅವರು ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ.
‘ಭಾರತ ಸರಿಯಾದ ಕ್ರಮವನ್ನು ತೆಗೆದುಕೊಂಡಿದೆ ಮತ್ತು ಪಾಕಿಸ್ಥಾನ ತನ್ನ ನಿಜ ಉದ್ದೇಶಗಳನ್ನು ಸಾಬೀತುಪಡಿಸುವವರೆಗೂ ಅದರ ಜೊತೆಗೆ ಯಾವುದೇ ಮಾತುಕತೆ ನಡೆಸಬಾರದು’ ಎಂದು ಎನ್.ಕೆ ಕಾಲಿಯಾ ಹೇಳಿದ್ದಾರೆ. ಸಂಬಂಧವನ್ನು ಬಲಪಡಿಸಲು ಮುಂದಾಗುವ ಭಾರತಕ್ಕೆ, ಪಾಕಿಸ್ಥಾನ ಯಾವಾಗಲೂ ಸಮಸ್ಯೆಯನ್ನೇ ಉಂಟುಮಾಡಿದೆ ಹೊರತು ಶಾಂತಿಯುತ ಮಾತುಕತೆಗೆ ಮುಂದಾಗಿಲ್ಲ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಪೋಲಿಸ್ ಅಧಿಕಾರಿ ಮತ್ತು ಓರ್ವ ಪೊಲೀಸರನ್ನು ಭಯೋತ್ಪಾದಕರು ಅಪಹರಿಸಿ ಕ್ರೂರವಾಗಿ ಹತ್ಯೆಗೈದ ಹಿನ್ನಲೆಯಲ್ಲಿ ಭಾರತ ಸರ್ಕಾರ ಪಾಕಿಸ್ಥಾನದೊಂದಿಗಿನ ಸಭೆಯನ್ನು ರದ್ದುಗೊಳಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.