ನವದೆಹಲಿ: ಗಡಿಗಳನ್ನು ಕಾಯುತ್ತಾ, ದೇಶದ ಭದ್ರತೆಗಾಗಿ ಶ್ರಮಪಡುತ್ತಿರುವ ಹೆಮ್ಮೆಯ ಯೋಧರೆಂದರೆ ಎಲ್ಲರಿಗೂ ಗೌರವ. ದೇಶ ಸೇವೆಗಾಗಿ ಜೀವನ ಮುಡುಪಾಗಿಟ್ಟಿರುವ ಅವರಿಗೆ ನಾವು ಎಷ್ಟು ಅಭಿನಂದನೆಗಳನ್ನು ಹೇಳಿದರೂ ಋಣ ಸಂದಾಯವಾಗದು. ಯುದ್ಧದ ಸಂದರ್ಭವೇ ಇರಲಿ, ಪ್ರಾಕೃತಿ ವಿಪತ್ತುಗಳ ಸಂದರ್ಭವೇ ಇರಲಿ ನಾಗರಿಕರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸುವ ಅವರು ನಮ್ಮೆಲ್ಲರ ಹೀರೋಗಳು. ಅಂತಹ ಹೀರೋಗಳಿಗೆ ದೇಶದ ಮೂಲೆ ಮೂಲೆಯಿಂದ ಪುಟಾಣಿ ಮಕ್ಕಳು ಪತ್ರ ಬರೆದು, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವಿಟರ್ ಮೂಲಕ ಹಲವು ಮಕ್ಕಳು ಯೋಧರಿಗೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ತಾವು ಸೈನಿಕರಿಗೆ ಸೆಲ್ಯೂಟ್ ಮಾಡುವಂತಹ ಚಿತ್ರಗಳನ್ನು ಮಕ್ಕಳು ಪತ್ರದಲ್ಲಿ ರಚಿಸಿದ್ದಾರೆ. ಇವುಗಳು ಹೃದಯಸ್ಪರ್ಶಿಯಾಗಿವೆ.
‘ಸೇನಾಪಡೆಗಳಿಗೆ ಪ್ರೀತಿ, ಔದಾರ್ಯವನ್ನು ತೋರಿಸಿ ದೇಶದಾದ್ಯಂತದ ಮಕ್ಕಳು ಬರೆದ ಪತ್ರವನ್ನು ಸ್ವೀಕರಿಸಲು ನಾವು ಪುಳಕಿತರಾಗಿದ್ದೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಇಂತಹ ಪತ್ರಗಳನ್ನು ಸೇನಾಪಡೆಗಳಿಗೆ ಬರೆಯುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಪೋಷಕರಿಗೆ, ಶೀಕ್ಷಕರಿಗೆ ಅವರು ಕರೆ ನೀಡಿದ್ದಾರೆ.
ಸೆ.27ರೊಳಗೆ ಕಳುಹಿಸಿದಂತಹ ಇಂತಹ ಪತ್ರಗಳನ್ನು ಸರ್ಜಿಕಲ್ ಸ್ಟ್ರೈಕ್ ದಿನಾಚರಣೆಯಂದು ಪ್ರದರ್ಶನಕ್ಕಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.
We are delighted to receive letters from children across India showing their love and admiration for our armed forces!
🇮🇳
(1/4) pic.twitter.com/ctkA3zCmOh— Raksha Mantri (@DefenceMinIndia) September 11, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.