ಮಂಗಳೂರು: ಕೆಲ ನಾಯಕರ ಒತ್ತಡಕ್ಕೆ ಮಣಿದು ಕೊನೆಗೂ ರಾಜ್ಯ ಸರ್ಕಾರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆ ಹೆಪ್ಸಿಬಾ ರಾಣಿ ಕರ್ಲೋಪತಿ ಅವರನ್ನು ವರ್ಗಾವಣೆಗೊಳಿಸಿದೆ.
ಅವರ ವರ್ಗಾವಣೆಯ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ, ಅವರನ್ನು ವಿಜಯಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವರು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆಯಾಗಿ ಕೇವಲ ಆರು ತಿಂಗಳುಗಳಷ್ಟೇ ಆಗಿದೆ.
ಹೆಪ್ಸಿಬಾ ಅವರ ಶಿಸ್ತುಬದ್ಧ ಕಾರ್ಯಶೈಲಿ ಹಲವಾರು ಕಾರ್ಪೋರೇಟರ್ಗಳನ್ನು ಉಸಿರುಗಟ್ಟಿಸಿತ್ತು, ನಗರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅವರು ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲು ನಿರ್ಧರಿಸಿದ್ದರು, ಆದರೆ ನಾಯಕರು ಎನಿಸಿಕೊಂಡವರಿಂದ ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ.
ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ತಮಗೆ ಗೌರವ ನೀಡುತ್ತಿಲ್ಲ ಎಂದು ಹಲವಾರು ಕಾರ್ಪೋರೇಟರ್ಗಳು ಆರೋಪಿಸುತ್ತಲೇ ಬಂದಿದ್ದರು, ಅಲ್ಲದೇ ಅವರನ್ನು ವರ್ಗಾಯಿಸುವಂತೆ ಸರ್ಕಾರದ ಮೇಲೆ ಹಿಂಬದಿಯಿಂದ ಒತ್ತಡ ಹೇರುತ್ತಿದ್ದರು.
ಇದೀಗ ಒತ್ತಡಕ್ಕೆ ಮಣಿದು ಸರ್ಕಾರ ದಿಟ್ಟ ಅಧಿಕಾರಿಣಿಯಾಗಿದ್ದ ಹೆಪ್ಸಿಬಾ ಅವರನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಭ್ರಷ್ಟಾಚಾರದ ವಿರುದ್ಧ ನಿಲ್ಲುವ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.