ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಜಯಿಸಿದ್ದ ಹೆಪ್ಟಥ್ಲೀಟ್ ಸ್ವಪ್ನಾ ಬರ್ಮನ್ ಅವರ 12 ಬೆರಳುಗಳ ಪಾದಗಳಿಗೆ ಹೊಂದಿಕೆಯಾಗುವ ಶೂವನ್ನು ಕ್ರೀಡಾ ಪ್ರಾಧಿಕಾರ ನೀಡಿದೆ.
ಅಡಿಡಾಸ್ ಸಂಸ್ಥೆ ಶೂ ಇದಾಗಿದ್ದು, ಆಕೆಗೋಸ್ಕರ ವಿಶೇಷವಾಗಿ ವಿನ್ಯಾಸ ಪಡಿಸಲಾಗಿದೆ. ಇದಕ್ಕಾಗಿ ಕ್ರೀಡಾ ಪ್ರಾಧಿಕಾರ ಅಡಿಡಾಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
12 ಬೆರಳುಗಳನ್ನು ಹೊಂದಿರುವುದರಿಂದ ಸ್ವಪ್ನಾ ಅವರಿಗೆ ಓಡುವುದು, ಜಿಗಿಯುವುದು ಅಸಹನೀಯ ನೋವುಂಟು ಮಾಡುತ್ತಿತ್ತು. ಅವರಿಗೆ ಹೊಂದಿಕೆಯಾಗುವ ಶೂ ಸಿಗುತ್ತಿಲ್ಲ ಎಂಬ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಕ್ರೀಡಾ ಪ್ರಾಧಿಕಾರ ಅವರ ಸಹಾಯಕ್ಕೆ ಧಾವಿಸಿದೆ.