ಮಂಗಳೂರು: ತುಳು ಚಿತ್ರರಂಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯು ತುಳು ಫಿಲಂ ಚೇಂಬರ್ ಸ್ಥಾಪಿಸಲು ಆಗ್ರಹಿಸಿದೆ. ಇದಕ್ಕೆ ಚಿತ್ರರಂಗದ ಎಲ್ಲಾ ವಿಭಾಗಗಳಿಂದ ಕೈಜೋಡಿಸಬೇಕೆಂದು ಮನವಿ ಮಾಡಿದೆ.
ತುಳು ಚಿತ್ರವಾದ ಚಾಲಿ ಪೋಲಿಲು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದನ್ನು ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಆಗ್ರಹಿಸಲಾಗಿದೆ.
ಚಿತ್ರರಂಗದ ಬೆಳವಣಿಗೆಗೆ ಫಿಲಂ ಚೇಂಬರ್ ಸ್ಥಾಪನೆ ಅಗತ್ಯ. ಚಿತ್ರಮಂದಿರಗಳು ಉಳಿದ ಭಾಷಾ ಚಿತ್ರಗಳಿಗಿಂತ ತುಳು ಭಾಷಾ ಚಿತ್ರಗಳಿಗೆ ಹೆಚ್ಚು ಬಾಡಿಗೆ ಪಡೆದುಕೊಳ್ಳಲು ಮುಂದಾಗುತ್ತಿವೆ, ಇದಕ್ಕೆ ನಮ್ಮ ವಿರೋಧವಿದೆ. ಎಲ್ಲಾ ಭಾಷೆಗಳ ಸಿನಿಮಾ ನಿರ್ಮಾಪಕರಿಂದ ಒಂದೇ ರೀತಿ ಬಾಡಿಗೆ ವಸೂಲು ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ತುಳುನಾಡ ರಕ್ಷಣಾ ವೇದಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.