ಮುಂಬಯಿ: ಗಂಗಾ ನದಿ ಶುದ್ಧೀಕರಣಕ್ಕಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆ ಪ್ರಗತಿಯಲ್ಲಿದ್ದು, 2020ರ ವೇಳೆಗೆ ಗಂಗೆ ಸಂಪೂರ್ಣ ಶುದ್ಧವಾಗಲಿದ್ದಾಳೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.
ಸುಮಾರು ರೂ.22,238 ಕೋಟಿ ವೆಚ್ಚದ ನಮಾಮಿ ಗಂಗೆ ಯೋಜನೆಯಡಿ ಅನುಷ್ಠಾನಗೊಳಿಸಿರುವ ಪ್ರತಿ ಕಾರ್ಯಗಳು ಮುಕ್ತಾಯದ ಹಂತದಲ್ಲಿವೆ ಎಂದಿದ್ದಾರೆ.
ಕಾರ್ಯ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ 2020ರ ಮಾರ್ಚ್ ವೇಳೆಗೆ ಗಂಗೆ ಶುದ್ಧವಾಗಲಿದ್ದಾಳೆ. ಇದು ಅತ್ಯಂತ ಸವಾಲಿನ ಕೆಲಸ ಎಂಬುದು ತಿಳಿದಿದೆ, ಆದರೂ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದಿದ್ದಾರೆ.
ಗಂಗೆ ಶುದ್ಧೀಕರಣದೊಂದಿಗೆ, ಅದರ ಉಪನದಿಗಳು, ನಾಲಾಗಳನ್ನು ಶುದ್ಧ ಮಾಡುವ ಪ್ರಕ್ರಿಯೆಗಳೂ ಸಾಗಿವೆ ಎಂದಿದ್ದಾರೆ.
ಖಾಸಗಿದಾರರೇ ಈ ಎಲ್ಲಾ ಯೋಜನೆಗಳನ್ನು ನಡೆಸುತ್ತಿದ್ದಾರೆ, ಆದರೆ ಯಾವುದೇ ಕಾರ್ಪೋರೇಟ್ಗಳಿಗೆ ಈ ಕಾರ್ಯವನ್ನು ವಹಿಸಲಾಗಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.