ನವದೆಹಲಿ: 2018ರ ಡಿಸೆಂಬರ್ 31ರೊಳಗೆ ದೇಶದ ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಗೊಳಪಡಿಸಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.
ಸೆ.1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗೆ ದೇಶವ್ಯಾಪಿ ಚಾಲನೆ ಸಿಗಲಿದೆ.
ಸೆ.1ರ ವೇಳೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ 650 ಬ್ರಾಂಚ್, 3,250 ಎಕ್ಸೆಸ್ ಪಾಯಿಂಟ್ಗಳನ್ನು ದೇಶದಾದ್ಯಂತ ಹೊಂದಲಿದೆ ಎಂದು ಸಚಿವರು ಹೇಳಿದ್ದಾರೆ.
2018ರ ಅಂತ್ಯದ ವೇಳೆಗೆ ಎಕ್ಸೆಸ್ ಪಾಯಿಂಟ್ಗಳು 1.55 ಲಕ್ಷಕ್ಕೆ ಏರಿಕೆಯಾಗಲಿವೆ, ಇದರಲ್ಲಿ 1.30 ಲಕ್ಷ ಬ್ರಾಂಚ್ಗಳು ಗ್ರಾಮೀಣ ಭಾಗದಲ್ಲಿ ಇರಲಿವೆ.
ಪೋಸ್ಟ್ ಆಫೀಸ್ಗಳಲ್ಲಿ ಉಳಿತಾಯ ಖಾತೆ ಹೊಂದಿರುವವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನೊಂದಿಗೆ ತಮ್ಮ ಅಕೌಂಟ್ನ್ನು ಲಿಂಕ್ ಮಾಡಿ ಅದರ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.