ನವದೆಹಲಿ: ವಿವಿಧ ವಲಯದಲ್ಲಿ ಸಮಾಜಕ್ಕೆ ಮಾದರಿ ಎನಿಸುವ ಕಾರ್ಯವನ್ನು ಮಾಡಿದವರಿಗೆ 2019ರ ಪದ್ಮ ಪ್ರಶಸ್ತಿಗಳನ್ನು ಪಡೆಯುವ ಅವಕಾಶ ಇನ್ನೂ ಇದೆ. ಆನ್ಲೈನ್ನಲ್ಲಿ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು 2018ರ ಸೆ.15 ಕೊನೆಯ ದಿನಾಂಕವಾಗಿದೆ. ಅಲ್ಲಿಯವರೆಗೆ ನಾವು ನಮಗೆ ತಿಳಿದಿರುವ ಸಾಧಕರನ್ನು ಇಲ್ಲಿ ನಾಮನಿರ್ದೇಶನಗೊಳಿಸಬಹುದಾಗಿದೆ.
2019ರ ಪದ್ಮ ಪ್ರಶಸ್ತಿಗೆ ಇಲ್ಲಿಯವರೆಗೆ 21 ಸಾವಿರ ನಾಮನಿರ್ದೇಶನಗಳು ಬಂದಿವೆ. ಸೆ.15ರವರೆಗೆ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಮಹಿಳೆಯರು, ಹಿಂದುಳಿದ ವರ್ಗ, ದಿವ್ಯಾಂಗರ ನಡುವಣ ಸಾಧಕರನ್ನು ಗುರುತಿಸುವಂತೆ ಗೃಹಸಚಿವಾಲಯ ಮನವಿ ಮಾಡಿಕೊಂಡಿದೆ.
ಸ್ವಯಂ ನಾಮನಿರ್ದೇಶನ ಸೇರಿದಂತೆ ತಮಗೆ ತಿಳಿದಿರುವ ಇತರ ಸಾಧಕರನ್ನೂ ’ಪದ್ಮ ಪೋರ್ಟಲ್’ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದೆ. ವಯಸ್ಸು, ಜಾತಿ, ಧರ್ಮ, ಪ್ರಾದೇಶಿಕತೆ, ಲಿಂಗದ ಹಂಗಿಲ್ಲದೆ ಎಲ್ಲರೂ ಪದ್ಮ ಪ್ರಶಸ್ತಿಗೆ ಅರ್ಹರು’
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.