ನವದೆಹಲಿ: JEE (Joint Entrance Examination), NEET (National Eligibility cum Entrance Test) ಮುಂತಾದುವುಗಳನ್ನು ಅತ್ಯಂತ ಕಷ್ಟದಾಯಕ ಪ್ರವೇಶ ಪರೀಕ್ಷೆಗಳು ಎಂದು ಪರಿಗಣಿಸಲಾಗುತ್ತದೆ. ಹಣವುಳ್ಳ ವಿದ್ಯಾರ್ಥಿಗಳು ಲಕ್ಷಾಂತರ ವ್ಯಯಿಸಿ ಕೋಚಿಂಗ್ ಪಡೆದು ಪರೀಕ್ಷೆ ಬರೆದು ಯಶಸ್ವಿಯಾಗುತ್ತಾರೆ. ಆದರೆ ಬಡ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೋಚಿಂಗ್ ಎನ್ನುವುದು ಗಗನಕುಸುಮವಿದ್ದಂತೆ. ಹೀಗಾಗಿ ಎಷ್ಟೋ ವಿದ್ಯಾರ್ಥಿಗಳು ಐಐಟಿಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಆಸೆಯನ್ನೇ ಬಿಟ್ಟು ಬಿಡುತ್ತಾರೆ.
ಆದರೆ ಇನ್ನು ಮುಂದೆ ಹಾಗಾಗಲಾರದು, ಯಾಕೆಂದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲು ನಿರ್ಧರಿಸಿದೆ. ದೇಶದಲ್ಲಿ ನೂರಾರು ಕೋಚಿಂಗ್ ಸೆಂಟರ್ಗಳನ್ನು ತೆರೆದು, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಉನ್ನತ ವ್ಯಾಸಂಗ ಪ್ರವೇಶ ಪರೀಕ್ಷೆಗಳ ಕೋಚಿಂಗ್ ನೀಡಲಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ 2019ರಿಂದ ತನ್ನ 2,697 ಟೆಸ್ಟ್ ಪ್ರ್ಯಾಕ್ಟಿಸ್ ಸೆಂಟರ್ಗಳನ್ನು ಟೀಚಿಂಗ್ ಸೆಂಟರ್ಗಳಾಗಿ ಪರಿವರ್ತಿಸಲಿದೆ. ಈ ಮೂಲಕ ಪ್ರತಿ ವಿದ್ಯಾರ್ಥಿಗೂ ಉಚಿತ ಕೋಚಿಂಗ್ ಸಿಗುವಂತೆ ನೋಡಿಕೊಳ್ಳಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಾಹಿತಿಯಂತೆ, 2019ರ ಮೇನಿಂದ ಕೋಚಿಂಗ್ಗಳು ಆರಂಭವಾಗಲಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.