ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮಾನವ ಸಹಿತ ಗಗನಯಾನವನ್ನು ಘೋಷಣೆ ಮಾಡಿದ ಬಳಿಕ ದೇಶದೆಲ್ಲೆಡೆ ಅದರ ಬಗೆಗಿನ ಕುತೂಹಲ ಗರಿಗೆದರಿದೆ.
ಭಾರತದ ಮೊತ್ತ ಮೊದಲ ಮಾನವ ಗಗನಯಾನದ ಸ್ವರೂಪ ಹೇಗಿರಬಹುದು, ಅದಕ್ಕೆ ಯಾವ ರೀತಿಯ ಸಿದ್ಧತೆಗಳು ನಡೆಯುತ್ತಿವೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಇಸ್ರೋ ಮಾಹಿತಿಯಂತೆ ಈಗಾಗಲೇ ಗಗನಯಾನಕ್ಕೆ ಸಿದ್ಧತೆಗಳು ಆರಂಭವಾಗಿವೆ, ನಭಕ್ಕೆ ಹಾರಲಿರುವ ತಜ್ಞರ ತಂಡ ಇನ್ನಷ್ಟೇ ರಚನೆಯಾಗಬೇಕಿದೆ.
ಮೂಲಗಳ ಪ್ರಕಾರ, 7 ದಿನಗಳ ಅವಧಿಗೆ 3 ವ್ಯಕ್ತಿಗಳನ್ನು ಬಾಹ್ಯಾಕಾಶಕ್ಕೆ ಇಸ್ರೋ ಕಳುಹಿಸಿಕೊಡಲಿದೆ. ಉಡಾವಣೆಗೊಂಡ 16 ನಿಮಿಷಗಳಲ್ಲಿ ಸ್ಪೇಸ್ಕ್ರಾಫ್ಟ್ ನಿಗದಿತ ಸ್ಥಳವನ್ನು ತಲುಪಲಿದೆ. ಭೂಮಿಗೆ ವಾಪಾಸ್ ಆಗುವ ಮುಂಚಿತವಾಗಿ 300ರಿಂದ 400 ಮೀಟರ್ ಕಡಿಮೆ ಭೂಕಕ್ಷೆಯಲ್ಲಿ ಈ ಸ್ಪೇಸ್ಕ್ರಾಫ್ಟ್ 5-7 ದಿನ ಇರಲಿದೆ. ಜಿಎಸ್ಎಲ್ವಿ ಎಂಕೆ III ಘನ ಉಡಾವಣ ವಾಹಕವನ್ನು ಗಗನಯಾನಕ್ಕೆ ಬಳಸಲಾಗುತ್ತದೆ.
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಗಗನಯಾನದ ಬಗ್ಗೆ ಹೊರ ಬೀಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.