ನವದೆಹಲಿ: ಭಾರತದ ವಿದೇಶಿ ನೇರ ಹೂಡಿಕೆಯು 2018-19ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23ರಷ್ಟು ಯುಎಸ್ಡಿ 12.75 ಬಿಲಿಯನ್ಗೆ ಏರಿಕೆಯಾಗಿದೆ ಎಂದು ಅಧಿಕೃತ ಅಂಕಿಅಂಶಗಳಿಂದ ತಿಳಿದು ಬಂದಿದೆ.
2017-18ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆಯ ಹರಿವು ಯುಎಸ್ಡಿ 10.4 ಬಿಲಿಯನ್ ಆಗಿತ್ತು. ಈ ಬಾರಿ ಅದು ಯುಎಸ್ಡಿ 12.75 ಬಿಲಿಯನ್ ಆಗಿದೆ ಎಂದು ಕೈಗಾರಿಕ ನೀತಿ ಮತ್ತು ಪ್ರಚಾರ ಇಲಾಖೆಯ ಅಂಕಿಅಂಶ ತಿಳಿಸಿದೆ.
ಹೆಚ್ಚಿನ ಪ್ರಮಾಣ ಹೂಡಿಕೆಗಳು ಸರ್ವಿಸ್ ಸೆಕ್ಟರ್ (USD 2.43 billion ), ಟ್ರೇಡಿಂಗ್ (USD 1.62 billion), ಟೆಲಿಕಮ್ಯೂನಿಕೇಶನ್ (USD 1.59 billion), ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್( USD 1.4 billion) ಮತ್ತು ಪವರ್ (USD 969 million ) ಹರಿದು ಬಂದಿದೆ.
ಸಿಂಗಾಪುರ ಅತೀದೊಡ್ಡ ಹೂಡಿಕೆದಾರನಾಗಿದ್ದು, ಯುಎಸ್ಡಿ 6.52 ಬಿಲಿಯನ್ನನ್ನು ಭಾರತದಲ್ಲಿ ಹೂಡಿಕೆ ಮಾಡಿದೆ. ಬಳಿಕದ ಸ್ಥಾನ ಮಾರಿಷಿಯಸ್ನದ್ದಾಗಿದ್ದು, ಯುಎಸ್ಡಿ 1.5 ಬಿಲಿಯನ್ ಹೂಡಿಕೆ ಮಾಡಿದೆ, ಜಪಾನ್ ಯುಎಸ್ಡಿ 875 ಮಿಲಿಯನ್ ಹೂಡಿಕೆ ಮಾಡಿದೆ, ನೆದರ್ಲ್ಯಾಂಡ್ ಯುಎಸ್ಡಿ 836 ಮಿಲಿಯನ್ ಹೂಡಿಕೆ ಮಾಡಿದೆ, ಯುಕೆ ಯುಎಸ್ಡಿ 648 ಮಿಲಿಯನ್ ಹೂಡಿಕೆ ಮಾಡಿದೆ, ಯುಎಸ್ ಯುಎಸ್ಡಿ 348 ಮಿಲಿಯನ್ ಹೂಡಿಕೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.