ಮುಂಬಯಿ: ಹಿಂದಿ ಸಿನಿಮಾ ರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರು ರೂ.1 ಕೋಟಿಯನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಮತ್ತು ರೂ.1.5 ಕೋಟಿಯನ್ನು ರೈತರ ಸಾಲಮನ್ನಾಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಹುತಾತ್ಮ ಯೋಧರ ಕುಟುಂಬಗಳಿಗೆ ತಾನು ಏನಾದರು ಮಾಡಬೇಕೆಂದು ಬಯಸಿದ್ದೇನೆ ಎಂದು 75 ವರ್ಷದ ಹಿರಿಯ ನಟ ಅಮಿತಾಭ್ ಹೇಳಿಕೊಂಡಿದ್ದಾರೆ.
‘ಸರ್ಕಾರದಿಂದ ನಿನ್ನಯಷ್ಟೇ 44 ಕುಟುಂಬಗಳ ಪಟ್ಟಿಯನ್ನು ಪಡೆದುಕೊಂಡಿದ್ದೇವೆ. ಈ ಕುಟುಂಬಗಳನ್ನು ನೋಡಿಕೊಳ್ಳುವ ಸಲುವಾಗಿ ಈಗಾಗಲೇ ನಾವು ರೂ.1 ಕೋಟಿ ಮೊತ್ತದ 112 ಬೇಡಿಕೆಯ ಕರಡನ್ನು ಸಿದ್ಧಪಡಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ಸರ್ಕಾರದಲ್ಲೊಂದು ವ್ಯವಸ್ಥೆಯಿದೆ. ಶೇ.60ರಷ್ಟು ಹಣ ಹುತಾತ್ಮನ ಪತ್ನಿಗೆ ಸೇರಬೇಕು, ಶೇ.20ರಷ್ಟು ತಂದೆಗೆ ಮತ್ತು ಶೇ.20ರಷ್ಟು ತಾಯಿಗೆ ಸೇರಬೇಕು. ಇದರನ್ವಯ ನಾವು 44 ಕುಟುಂಬಗಳಿಗೆ ರೂ.1ಕೋಟಿ ಮೊತ್ತವನ್ನು ಹಂಚಿಕೆ ಮಾಡಿದ್ದೇವೆ’ ಎಂದಿದ್ದಾರೆ.
ರೈತರ ಸಾವಿನಿಂದ ನನಗೆ ತೀವ್ರ ನೋವಾಗಿದೆ, ಹೀಗಾಗಿ ಅವರಿಗೂ ಏನನ್ನಾದರು ಮಾಡಬೇಕು ಎಂದು ಬಯಸಿದ್ದೇನೆ. ಹೀಗಾಗಿ 1.5 ಕೋಟಿ ರೂಪಾಯಿ ಹಣವನ್ನು ಹಂಚಿಕೆ ಮಾಡುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.