ನವದೆಹಲಿ: ಬಾಲ್ಯವಿವಾಹವನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಸಿದ್ಧಪಡಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎರಡು ದಿನಗಳ ವಿಚಾರ ಸಂಕಿರಣವನ್ನು ಆಯೋಜನೆಗೊಳಿಸಿದೆ.
ಬುಧವಾರದಿಂದ ದೆಹಲಿಯಲ್ಲಿ ‘ನ್ಯಾಷನಲ್ ಕಾನ್ಫರೆನ್ಸ್ ಆನ್ ಚೈಲ್ಡ್ ಮ್ಯಾರೇಜ್’ ಆರಂಭಗೊಳ್ಳಲಿದ್ದು, ನಾಗರಿಕ ಸಮಾಜದ ಸದಸ್ಯರು, ಸರ್ಕಾರಿ ಸಂಸ್ಥೆಗಳ ಸದಸ್ಯರು, ವಿವಿಧ ಆಯೋಗಗಳ ಸದಸ್ಯರು, ರಾಜ್ಯ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ವಿಚಾರಣಸಂಕಿರಣವನ್ನು 5 ಸೆಷನ್ಗಳಾಗಿ ವಿಂಗಡಿಸಲಾಗುತ್ತಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳು, ನೀತಿ ಚೌಕಟ್ಟುಗಳು, ಅವುಗಳ ಅನ್ವಯಿಸುವಿಕೆ, ಅಂತರ ಗುರುತಿಸುವಿಕೆ, ಬಾಲ್ಯವಿವಾಹ ತಡೆಗೆ ಕಾರ್ಯತಂತ್ರದ ಮಧ್ಯಸ್ಥಿಕೆಗಳ ಬಗ್ಗೆ 5 ಸೆಷನ್ಗಳು ವಿವರಿಸಲಿದೆ ಮತ್ತು ವಿಮರ್ಶೆಗೊಳಪಡಿಸಲಿದೆ.
ಬಾಲ್ಯವಿವಾಹ ತಡೆಗೆ ಕಾನೂನುಗಳಿದ್ದರೂ ಅವುಗಳ ಸಮರ್ಪಕವಾದ ಬಳಕೆಯಾಗುತ್ತಿಲ್ಲ, ಆಧುನಿಕ ಸಮಾಜದಲ್ಲಿ ಇನ್ನೂ ಸಮಾಜದಲ್ಲಿ ಬಾಲ್ಯವಿವಾಹ ಜೀವಂತವಾಗಿದೆ ಎಂಬುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಈ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಪ್ರಬಲ ಕಾರ್ಯತಂತ್ರದ ಅನಿವಾರ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.