ಲಕ್ನೋ: ಅಲಹಾಬಾದ್ನಲ್ಲಿ ಮುಂದಿನ ವರ್ಷ ಮಹಾ ಕುಂಭಮೇಳ ಜರುಗಲಿದ್ದು, ಈಗಿನಿಂದಲೇ ಉತ್ತರಪ್ರದೇಶ ಸರ್ಕಾರ ಅದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದೆ. ದೇಶ ವಿದೇಶಗಳ ಕೋಟ್ಯಾಂತರ ಜನರು ಕುಂಭಮೇಳ ಸಂದರ್ಭ ಇಲ್ಲಿಗೆ ಆಗಮಿಸಿ ಪವಿತ್ರ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ಕುಂಭಮೇಳವನ್ನು ಹಿಂದೆಂದಿಗಿಂತಲೂ ಅತ್ಯಂತ ಅಭೂತಪೂರ್ವವಾಗಿ ನೆರವೇರಿಸಲು ಯುಪಿ ಸಿಎಂ ಯೋಗಿ ಆದಿತ್ಯನಾಥ ಶ್ರಮಿಸುತ್ತಿದ್ದಾರೆ. ವಿಶ್ವದ 190 ರಾಷ್ಟ್ರಗಳನ್ನು 12 ವರ್ಷಗಳಿಗೊಮ್ಮೆ ಜರುಗುವ ಈ ಕುಂಭಮೇಳಕ್ಕೆ ಆಹ್ವಾನಿಸಲು ಅವರು ನಿರ್ಧಾರ ಮಾಡಿದ್ದಾರೆ.
‘ಕುಂಭ ಮೇಳ ಜಗತ್ತಿನ ಅತೀ ದೊಡ್ಡ ಮಾನವ ಸಂಸ್ಕೃತಿ ಮತ್ತು ನಂಬಿಕೆಯ ಸಮಾವೇಶವಾಗಿದೆ, 190 ರಾಷ್ಟ್ರಗಳಿಗೂ ಈ ಸಮಾವೇಶದಲ್ಲಿ ಭಾಗಿಯಾಗಲು ಆಮಂತ್ರಣ ನೀಡುತ್ತೇವೆ. ಭಾರತದ ಪ್ರತಿ ಗ್ರಾಮದ ಕನಿಷ್ಠ ಇಬ್ಬರು ವ್ಯಕ್ತಿಗಳಾದರೂ ಇಲ್ಲಿಗೆ ಆಗಮಿಸಬೇಕು ಎಂಬ ನಿಟ್ಟಿನಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ’ ಎಂದು ಯೋಗಿ ಹೇಳಿದ್ದಾರೆ.
ಇಂಟರ್ನ್ಯಾಷನಲ್ ಟೂರ್ ಆಪರೇಟರ್ಗಳ ಮೂಲಕ ಕುಂಭಮೇಳಕ್ಕೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಲು ಯೋಗಿ ಮುಂದಾಗಿದ್ದಾರೆ. ಇದಕ್ಕಾಗಿ ಲಕ್ನೋದಲ್ಲಿ ನಾಲ್ಕನೇ ಯುಪಿ ಟ್ರಾವೆಲ್ ಮಾರ್ಟ್ ಆಯೋಜನೆಗೊಳಿಸಿದ್ದಾರೆ. 23 ದೇಶಗಳ 53 ಟೂರ್ ಆಪರೇಟರ್ಗಳು, ದೇಶದ ಪ್ರಮುಖ 19 ಟೂರ್ ಆಪರೇಟರ್ಗಳು ಇದರಲ್ಲಿ ಭಾಗಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.