ನವದೆಹಲಿ: ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರ ರಾಖಿ ಸಹೋದರಿ ಖಮರ್ ಮೊಹ್ಸೀನ್ ಶೇಖ್ ಅವರು, ನವದೆಹಲಿಯ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಅವರಿಗೆ ರಾಖಿಯನ್ನು ಕಟ್ಟಿದ್ದಾರೆ.
ದೆಹಲಿ ನಿವಾಸಿಯಾಗಿರುವ ಪಾಕಿಸ್ಥಾನದ ಮೂಲದ ಶೇಖ್, ಕಳೆದ 24 ವರ್ಷಗಳಿಂದ ಮೋದಿಯವರಿಗೆ ರಾಖಿಯನ್ನು ಕಟ್ಟುತ್ತಾ ಬಂದಿದ್ದಾರೆ.
ಮೋದಿಯೊಂದಿಗಿನ ಬಾಂಧವ್ಯವನ್ನು ಮೆಲುಕು ಹಾಕಿಕೊಂಡಿರುವ ಅವರು, ‘ಆರ್ಎಸ್ಎಸ್ನಲ್ಲಿದ್ದಾಗಿನಿಂದ ಮೋದಿಯವರನ್ನು ನಾನು ಬಲ್ಲೆ, 24 ವರ್ಷದಿಂದ ಅವರಿಗೆ ರಾಖಿ ಕಟ್ಟುತ್ತಿದ್ದೇನೆ. ಅಂದಿಗೂ ಇಂದಿಗೂ ಅವರು ಹಾಗೆಯೇ ಇದ್ದಾರೆ, ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ’ ಎಂದಿದ್ದಾರೆ.
‘ಪ್ರಧಾನಿಗಳು ಈಗ ಅತ್ಯಂತ ಬ್ಯೂಸಿಯಾಗಿರುತ್ತಾರೆಂದು ಅಂದುಕೊಂಡಿದ್ದೆ, ಆದರೆ ಎರಡು ದಿನಗಳ ಹಿಂದೆ ನನಗೆ ಅವರು ಫೋನಾಯಿಸಿದ್ದರು. ನಿಜಕ್ಕೂ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು, ತಕ್ಷಣವೇ ರಾಖಿ ತಯಾರಿಸಲು ಆರಂಭಿಸಿದೆ’ ಎಂದಿದ್ದಾರೆ.
ಶೇಖ್ ಅವರು ಮಾತ್ರವಲ್ಲದೇ, ಅಪಾರ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಅವರ ನಿವಾಸಕ್ಕೆ ಬಂದು ಅವರಿಗೆ ರಾಖಿ ಕಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.