ಸೂರತ್: ರಕ್ಷಾಬಂಧನ ಸಮೀಪಿಸುತ್ತಿದ್ದು, ಸಹೋದರಿ ಸಹೋದರನಿಗೆ ರಾಖಿ ಕಟ್ಟಿ ಆತನ ಯಶಸ್ಸಿಗೆ ಪ್ರಾರ್ಥಿಸುವುದು, ತನಗೆ ಶ್ರೀರಕ್ಷೆಯಾಗುವಂತೆ ಕೋರುವುದು ಈ ಹಬ್ಬದ ವಿಶೇಷತೆ.
ಮಾರುಕಟ್ಟೆಗಳಲ್ಲಿ ತರತರನಾದ ರಾಖಿಗಳು ಲಗ್ಗೆ ಇಟ್ಟಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ. ಗುಜರಾತ್ನ ಸೂರತ್ನ ಜ್ಯುವೆಲ್ಲರಿ ಶಾಪ್ವೊಂದು ವಿಶೇಷ ರಾಖಿಗಳನ್ನು ಸಿದ್ಧಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ, ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರ ಭಾವಚಿತ್ರವನ್ನೊಳಗೊಂಡ ಬಂಗಾರದ ರಾಖಿಯನ್ನು ಇಲ್ಲಿ ಸಿದ್ಧಪಡಿಸಲಾಗಿದೆ, 22 ಕ್ಯಾರೆಟ್ನ ಬಂಗಾರ ಇದಾಗಿದ್ದು, ಉತ್ತಮ ಬೇಡಿಕೆ ಬಂದಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಒಟ್ಟು ಇಂತಹ 50 ರಾಖಿಗಳನ್ನು ಸಿದ್ಧಪಡಿಸಲಾಗಿದ್ದು, ಈಗಾಗಲೇ 47 ಮಾರಾಟವಾಗಿದೆ, ಪ್ರತಿ ಒಂದು ರಾಖಿಗೆ ರೂ.50 ಸಾವಿರದಿಂದ ರೂ.70 ಸಾವಿರ ನಿಗದಿಪಡಿಸಲಾಗಿದೆ ಎಂದು ಜ್ಯುವೆಲ್ಲರಿ ಶಾಪ್ ಮಾಲೀಕ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.