ನವದೆಹಲಿ: ಕಳೆದ 10 ತಿಂಗಳುಗಳಲ್ಲಿ ಸರಿ ಸುಮಾರು 1, 20, 00, 000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸೆಂಟ್ರಲ್ ಸ್ಟಾಟಿಸ್ಟಿಕ್ಸ್ ಆಫೀಸ್(CSO) ಹೇಳಿದೆ.
ಇಪಿಎಫ್ – Employee’s Provident Fund Office(EPFO) , Employee’s State Insurence(ESIC) ಹಾಗೂ National Pension Scheme (NPS) ಇವುಗಳಲ್ಲಿ ನೋಂದಣಿ ಹೊಂದಿದ ಉದ್ಯೋಗಿಗಳ ಸಂಖ್ಯೆಯ ಅಧಾರದಲ್ಲಿ ಈ ವರದಿಯು ಮಾಡಲ್ಪಟ್ಟಿದೆ. ಸೆಪ್ಟೆಂಬರ್ 2017 ರಿಂದ ಜೂನ್ 2018 ರ ಅವಧಿಯಲ್ಲಿ ESI ಗೆ 1,19,66,126 ಮಂದಿ ಸದಸ್ಯರು ನೊಂದಾಯಿಸಲ್ಪಟ್ಟಿದ್ದಾರೆ. 2018 ರ ಮೇ ತಿಂಗಳಲ್ಲಿ ESIC ಗೆ 13,18,395 ಸದಸ್ಯರು ನೊಂದಾಯಿಸಲ್ಪಟ್ಟಿದ್ದಾರೆ. ಅದೇ ರೀತಿ ಸೆಪ್ಟೆಂಬರ್ 2017 ರಿಂದ ಜೂನ್ 2018 ರ ಅವಧಿಯಲ್ಲಿ 1,07,54,573 EPF ಗೆ ನೊಂದಾಯಿಸಲ್ಪಟ್ಟಿದ್ದಾರೆ. ಇದೇ ಅವಧಿಯಲ್ಲಿ NPS ಗೆ 6,10,573 ಮಂದಿ ಸದಸ್ಯರಾಗಿದ್ದಾರೆ. EPF, ESIC ಹಾಗೂ NPS ಗಳು ಅಧಿಕೃತ ಸರಕಾರಿ ದಾಖಲೆಗಳಾಗಿದ್ದು ಇವುಗಳಿಂದ ಈ ಸಂಖ್ಯೆಗಳನ್ನು CSO ವು ಎತ್ತಿಕೊಂಡಿದೆ.
ಈ ವರದಿಯು ಸಾಂಪ್ರದಾಯಿಕ ವಲಯದಲ್ಲಿ ಸೃಷ್ಟಿಯಾದ ಉದ್ಯೋಗಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಸಾಂಪ್ರದಾಯಿಕ ವಲಯದಲ್ಲಿ ಸೃಷ್ಟಿಯಾದ ಉದ್ಯೋಗದ 2 ಪಟ್ಟು ಉದ್ಯೋಗವು ಅಸಾಂಪ್ರದಾಯಿಕ ವಲಯದಲ್ಲಿ ಸೃಷ್ಟಿಯಾಗುತ್ತದಾದರೂ ಈ CSO ವರದಿಯು ಅಸಾಂಪ್ರದಾಯಿಕ ವಲಯದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆಯನ್ನು ಪರಿಗಣಿಸಿಲ್ಲ. ಹಾಗಾಗಿ ಅಸಾಂಪ್ರದಾಯಿಕ ವಲಯದಲ್ಲಿ 2 ಕೋಟಿ ಉದ್ಯೋಗಗಳು ರೂಪಿತವಾಗಿರಬಹುದು ಎಂದು ಊಹಿಸಬಹುದಾಗಿದೆ. ಕಳೆದ 10 ತಿಂಗಳುಗಳಲ್ಲಿ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ವಲಯಗಳೆರಡೂ ಸೇರಿ 3 ಕೋಟಿಗಿಂತಲೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.