ನವದೆಹಲಿ: ಜನರು ತಮ್ಮ ಜನಪ್ರತಿನಿಧಿಗಳಿಗೆ ರೇಟಿಂಗ್ಸ್ ನೀಡುವ ಅವಕಾಶವನ್ನು ಒದಗಿಸುವ ಆ್ಯಪ್ ವೊಂದನ್ನು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ.
‘ನೇತಾ’ ಆ್ಯಪ್ ಜನಪ್ರತಿನಿಧಿಗಳ ಕಾರ್ಯಕ್ಷಮತೆಯ ಬಗ್ಗೆ ರೇಟಿಂಗ್ಸ್ನ್ನು ನೀಡಲು ಜನರಿಗೆ ಅವಕಾಶವನ್ನು ಒದಗಿಸುವ ಒಂದು ತಂತ್ರಜ್ಞಾನ ವೇದಿಕೆಯಾಗಿದೆ.
ಈ ಆ್ಯಪ್ ಜನಪ್ರತಿನಿಧಿಯ ಕಾರ್ಯ ಕ್ಷಮತೆಯನ್ನು ಮುಂಚಿತವಾಗಿಯೇ ವಿಶ್ಲೇಷಣೆಗೊಳಿಸುತ್ತದೆ, ಇದರಿಂದ ಆತನ ಹೊಣೆಗಾರಿಕೆ ಹೆಚ್ಚುತ್ತದೆ ಎಂದು ಈ ಆ್ಯಪ್ನ ತಯಾರಕರು ಹೇಳಿದ್ದಾರೆ.
ಜನಪ್ರತಿನಿಧಿಗೆ ರೇಟಿಂಗ್ಸ್ ನೀಡುವುದು ಮಾತ್ರವಲ್ಲ, ಯಾವುದೇ ಕ್ಷಣದಲ್ಲೂ ಮತದಾರನ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಚುನಾವಣಾಧಿಕಾರಿ ಎಸ್ವೈ ಖುರೇಶಿ, ನಸೀಮ್ ಝೈದಿ, ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್, ಮಾಜಿ ಮುಖಂಡ ಮುರಳಿ ಮನೋಹರ್ ಜೋಶಿ ಮುಂತಾದವರು ಆಪ್ ಲೋಕಾರ್ಪಣೆ ವೇಳೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.