ನವದೆಹಲಿ: ವರ್ಷದ ಹಲವಾರು ತಿಂಗಳುಗಳಲ್ಲಿ ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಅತ್ಯಗತ್ಯ ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದು ಹವಾಮಾನದ ಕಾರಣದಿಂದಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ಯೋಧರ ಬದುಕು ತೀರಾ ಕಷ್ಟಕರವಾಗುತ್ತದೆ. ಆದರೆ ಇನ್ನು ಮುಂದೆ ಪರಿಸ್ಥಿತಿಗಳು ಬದಲಾಗುವ ಆಶಾವಾದ ಮೂಡಿದೆ.
ಹೌದು! ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಸಿಯಾಚಿನ್ನಲ್ಲಿನ ವೀರ ಯೋಧರ ರಕ್ಷಣೆಗೆ ಧಾವಿಸಿದೆ. ಯೋಧರಿಗೆ ಸೂಕ್ತ ವೈದ್ಯಕೀಯ ನೆರವು, ಅತ್ಯಗತ್ಯ ಔಷಧಿಗಳನ್ನು ಪೂರೈಕೆ ಮಾಡುವಲ್ಲಿ ಇಸ್ರೋ ತಂತ್ರಜ್ಞಾನವನ್ನು ಬಳಸುವ ನಿರ್ಣಯಕ್ಕೆ ಸಹಿ ಬಿದ್ದಿದೆ.
ಇಸ್ರೋದ ಅಭಿವೃದ್ಧಿ ಮತ್ತು ಶಿಕ್ಷಣ ಸಂಪರ್ಕ ಘಟಕ(ಡಿಇಸಿಯು), ಅಹ್ಮದಬಾದ್ನ ಬಾಹ್ಯಾಕಾಶ ಇಲಾಖೆ, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್(ಮೆಡಿಕಲ್), ರಕ್ಷಣಾ ಸಚಿವಾಲಯದ ನಡುವೆ ಈ ಬಗೆಗಿನ ಒಪ್ಪಂದಕ್ಕೆ ಶುಕ್ರವಾರ ಸಹಿ ಬಿದ್ದಿದೆ.
ಮೊದಲ ಹಂತದಲ್ಲಿ ಹಲವಾರು ಟೆಲಿಮೆಡಿಸಿನ್ ನೋಡ್ಸ್ ಸ್ಥಾಪನೆಯಾಗಲಿದ್ದು, ಇದು ಸಿಯಾಚಿನ್ನಂತಹ ಕಠಿಣ ಸ್ಥಳಗಳಲ್ಲಿ ನಿಯೋಜಿತರಾಗಿರುವ ಭಾರತೀಯ ವಾಯುಸೇನೆ, ನೌಕಾ ಪಡೆ ಮತ್ತು ಭೂ ಸೇನಾ ಸಿಬ್ಬಂದಿಗಳಿಗೆ ವೈದ್ಯಕೀಯ ನೆರವನ್ನು ನೀಡಲು ಸಹಾಯ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.