ಲಕ್ನೋ: ರಕ್ಷಾ ಬಂಧನದ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಸೇವೆಯನ್ನು ನೀಡಲಾಗುತ್ತಿದೆ. ಆ.25ರ ಮಧ್ಯರಾತ್ರಿಯಿಂದ ಆ.26ರ ಮಧ್ಯರಾತ್ರಿಯವರೆಗೆ ಈ ಉಚಿತ ಬಸ್ ಸೇವೆ ಮಹಿಳೆಯರಿಗೆ ಲಭ್ಯವಾಗಲಿದೆ.
ಸಿಎಂ ಯೋಗಿ ಆದಿತ್ಯನಾಥ ಈ ಸೇವೆಯನ್ನು ಘೋಷಣೆ ಮಾಡಿದ್ದು, ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಎಸಿ ಬಸ್ ಸೇರಿದಂತೆ ಎಲ್ಲಾ ಕೆಟಗರಿಯ ಬಸ್ಗಳಲ್ಲೂ ರಕ್ಷಾ ಬಂಧನದಂದು ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಅಲ್ಲದೇ ರಕ್ಷಾ ಬಂಧನವನ್ನು ಮಹಿಳೆಯರಿಗೆ ವಿಶೇಷವಾಗಿಸುವ ಸಲುವಾಗಿ ಭಾರತೀಯ ರೈಲ್ವೇಯ ದೆಹಲಿ ಡಿವಿಷನ್, ಮಹಿಳಾ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಆ.26ರಂದು ದೇಶದಾದ್ಯಂತ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.