ಜಮ್ಮು: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 142 ಉಗ್ರರು ಹತರಾಗಿದ್ದಾರೆ ಎಂದು ಸಿಆರ್ಪಿಎಫ್ ಡೈರೆಕ್ಟರ್ ಜನರಲ್ ಆರ್ಆರ್ ಭಟ್ನಾಗರ್ ಹೇಳಿದ್ದಾರೆ.
ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಸುಮಾರು 200-250 ಉಗ್ರವಾದಿಗಳು ಕಾರ್ಯಾಚರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2016-17ಕ್ಕೆ ಹೋಲಿಸಿದರೆ ಈ ವರ್ಷ ಕಣಿವೆ ರಾಜ್ಯದ ಕಾನೂನು-ಸುವ್ಯವಸ್ಥೆ ಉತ್ತಮವಾಗಿದೆ, ಗಾಯಗೊಂಡ ಯೋಧರ ಸಂಖ್ಯೆ ಇಳಿಮುಖವಾಗಿದೆ ಎಂದಿದ್ದಾರೆ.
ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿರುವ ಯುವಕರ ಮನಃಪರಿವರ್ತನೆಗೆಂದು ಆರಂಭಿಸಿರುವ ಹೆಲ್ಪ್ಲೈನ್ ‘ಮದದ್ಗಾರ್’ಗೆ 1 ವರ್ಷದಲ್ಲಿ 2.5 ಲಕ್ಷ ಕರೆಗಳು ಬಂದಿವೆ ಎಂದಿದ್ದಾರೆ.
ಈ ವರ್ಷ 142 ಉಗ್ರರನ್ನು ಕೊಂದು ಹಾಕಿದ್ದೇವೆ, ಕಳೆದ ಬಾರಿಯೂ ಕಾರ್ಯಾಚರಣೆಯಲ್ಲಿ ಉತ್ತಮ ಫಲ ಸಿಕ್ಕಿತ್ತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.