ನವದೆಹಲಿ: ಸಿಎಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ತನ್ನ ಸದಸ್ಯರಿಗಾಗಿ ಮುಂದಿನ ತಿಂಗಳು ಎಕ್ಸ್ಕ್ಲೂಸಿವ್ ಜಾಬ್ ಪೋರ್ಟಲ್ನ್ನು ಹೊರ ತರುತ್ತಿದೆ.
ಸೆ.1ರಂದು ಸಂಸ್ಥೆ ಮಂಡಳಿ ಸದಸ್ಯರು ಮತ್ತು ಐಸಿಎಐ ಉದ್ಯಮ ಜಂಟಿಯಾಗಿ ಪೋರ್ಟಲ್ನ್ನು ಲೋಕಾರ್ಪಣೆಗೊಳಿಸಲಿದೆ.
ಈ ಬಗ್ಗೆ ಹೇಳಿಕೆ ನೀಡಿರುವ CMI&B ICAI ಮುಖ್ಯಸ್ಥ ಧೀರಜ್ ಕುಮಾರ್ ಖಂಡೇಲ್ವಾಲ, ‘ಪ್ರಸ್ತುತ ಚಾರ್ಟೆರ್ಡ್ ಅಕೌಂಟೆಂಟ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಾವು ಸಾಮಾನ್ಯವಾಗಿ 3 ಸಾವಿರ ಅಭ್ಯರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ಗೆ ಇಡುತ್ತಿದ್ದೆವು, ಈಗ ಅದು ದ್ವಿಗುಣಗೊಂಡು 6 ಸಾವಿರಕ್ಕೆ ಏರಿದೆ, ವಿವಿಧ ಆಯಾಮಗಳಲ್ಲಿ ಸಿಎಗಳಿಗೆ ಬೇಡಿಕೆ ಏರುತ್ತಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.