News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಡ್ ವಿರುದ್ಧ ಜಯಗಳಿಸಿದ ಭಾರತ ತಂಡ

ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವು 203 ರನ್‌ಗಳ ಅಂತರದಿಂದ  ಗೆಲುವನ್ನು ತನ್ನದಾಗಿಸಿಕೊಂಡಿದೆ. ಇಂಗ್ಲೆಂಡ್ 5ನೇ ದಿನವನ್ನು 311/9 ನಿಂದ ಆರಂಭಿಸಿ, ಕೇವಲ 3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸ್ಪಿನ್ನರ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಕೊನೆಯ ಬ್ಯಾಟ್ಸಮನ್ ಆಂಡರ್ಸನ್ ಅವರ ವಿಕೆಟ್‌ನ್ನು ಪಡೆದರು. ಇಂಗ್ಲೆಂಡ್ 317ಕ್ಕೆ ಆಲ್ ಔಟ್ ಆಯಿತು. ಐದು ಪಂದ್ಯಗಳ ಸರಣಿಯಲ್ಲಿ ಈಗ 3 ಪಂದ್ಯಗಳು ಪೂರ್ಣಗೊಂಡಿದ್ದು, ಇಂಗ್ಲೆಂಡ್ 2 ಮತ್ತು ಭಾರತ 1 ಅಂಕಗಳನ್ನು ಪಡೆದಿಕೊಂಡಿವೆ.

ವಿರಾಟ್ ಕೊಹ್ಲಿ ಪಂದ್ಯದ ಅತ್ಯುತ್ತಮ ಆಟಗಾರರಾಗಿದ್ದರು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 1 ಅಂಕವನ್ನು ಗಳಿಸಿ, ಸರಣಿಯನ್ನು ತಮ್ಮದಾಗಿಸಿಕೊಳ್ಳುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಮುಂದಿನ ಪಂದ್ಯ ಸೌಥಹ್ಯಾಂಪಸ್ಟೆಡ್‌ನಲ್ಲಿ ಆ.30 ರಂದು ಹಾಗೂ ಕೊನೆಯ ಪಂದ್ಯ ದಿ ಓವಲ್‌ನಲ್ಲಿ ಸೆ.7 ರಂದು ನಡೆಯಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top