×
Home About Us Advertise With s Contact Us

ಕೊಡಗಿಗೆ ರೂ.1ಕೋಟಿಯ ಜನರಿಕ್ ಔಷಧಿ: ಸಚಿವ ಅನಂತ್ ಕುಮಾರ್

ಬೆಂಗಳೂರು: ಭೀಕರ ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಕೊಡಗಿನಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಮೃತಪಟ್ಟ ಪ್ರಾಣಿಗಳ ಬಗ್ಗೆ ಲೆಕ್ಕವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮವಾಗಿ ಕೊಡಗಿಗೆ ರೂ.1 ಕೋಟಿ ಮೌಲ್ಯದ ಜನರಿಕ್ ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 15 ಟ್ರಕ್‌ಗಳಲ್ಲಿ ಪರಿಹಾರ ಸಾಮಾಗ್ರಿಗಳನ್ನು ಕೊಡಗಿಗೆ ಬೀಳ್ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಬಂದು ಹೋದ ಬಳಿಕ ಸಾಂಕ್ರಾಮಿಕ ರೋಗ ಹರಡುವ ಭಯ ಇರುತ್ತದೆ, ಇದಕ್ಕಾಗಿ ಮುಂಜಾಗೃತ ಕ್ರಮವಾಗಿ ಜನರಿಕ್ ಔಷಧಿಗಳನ್ನು ಕಳುಹಿಸಿಕೊಡಲಿದ್ದೇವೆ ಎಂದರು.

 

Recent News

Back To Top
error: Content is protected !!