ನನಗೆ ವಯಸ್ಸಾಯಿತು, ಇನ್ನು ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಎಂಬಂತೆ ಲತಿಕ ಚಕ್ರವರ್ತಿ ಎಂಬ 89 ವರ್ಷದ ಮಹಿಳೆ ತಮ್ಮ ಹ್ಯಾಂಡ್ಮೇಡ್ ಬ್ಯಾಗುಗಳನ್ನು ಮಾರಾಟ ಮಾಡಲು ವೆಬ್ಸೈಟ್ ಆರಂಭಿಸಿದ್ದಾರೆ.
ತನ್ನ ಜೀವನದುದ್ದಕ್ಕೂ ಬ್ಯಾಗುಗಳನ್ನು ತಯಾರಿಸುತ್ತ ಬಂದಿರುವ ಇವರು, ಇತ್ತೀಚಿಗಷ್ಟೇ ಆನ್ಲೈನ್ ಮಾರಾಟಕ್ಕೆ ಇಳಿದಿದ್ದಾರೆ. ಇವರ ಬ್ಯಾಗುಗಳಿಗೆ ಜಗತ್ತಿನಾದ್ಯಂತದಿಂದ ಬೇಡಿಕೆ ಬರುತ್ತಿದೆ ಎಂಬುದು ವಿಶೇಷ.
ಅಸ್ಸಾಂನಲ್ಲಿ ಹುಟ್ಟಿರುವ ಇವರಿಗೆ, ಬಾಲ್ಯದಿಂದಲೇ ಸುಂದರವಾದ ಬ್ಯಾಗುಗಳನ್ನು ತಯಾರಿಸುವ ಕಲೆ ಬಂದಿದೆ. ಇವರ ಮಗ ಕ್ಯಾಪ್ಟನ್ ರಾಜ್ ಚಕ್ರವರ್ತಿಯವರು ಭಾರತೀಯ ಸೇನೆಯಲ್ಲಿ ಇರುವ ಕಾರಣ ಅವರೊಂದಿಗೆ ದೇಶದಾದ್ಯಂತ ಸುತ್ತುವುದು ಇವರಿಗೆ ಅನಿವಾರ್ಯ. ಆದರೆ ಹೋದ ಕಡೆಯಿಂದ ಅಲ್ಲಿನ ಸುಂದರವಾದ ಬಟ್ಟೆಗಳನ್ನು ಖರೀದಿಸಿ ತರುತ್ತಾರೆ. ಬಳಿಕ ಅವುಗಳಿಗೆ ಹೊಸ ಹೊಸ ವಿನ್ಯಾಸ ನೀಡಿ ಬ್ಯಾಗ್ ತಯಾರು ಮಾಡುತ್ತಾರೆ.
ಜರ್ಮನಿಯಲ್ಲಿರುವ ಇವರ ಮೊಮ್ಮಗ ಇವರ ಬ್ಯಾಗುಗಳಿಗಾಗಿ ‘ಲತಿಕಾಸ್ ಬ್ಯಾಗ್’ ಎಂಬ ವೆಬ್ಸೈಟ್ ವಿನ್ಯಾಸಪಡಿಸಿಕೊಟ್ಟಿದ್ದಾರೆ. ಪ್ರಸ್ತುತ ಇವರಿಗೆ ವೆಬ್ಸೈಟ್ನಲ್ಲಿ ಹೆಚ್ಚು ಬೇಡಿಕೆಗಳು ಬರುತ್ತಿವೆ, ರೂ.500ರಿಂದ ಇವರ ಬ್ಯಾಗುಗಳ ಬೆಲೆ ಆರಂಭವಾಗುತ್ತದೆ. ಈ ವಯಸ್ಸಿನಲ್ಲೂ ಖುದ್ದಾಗಿ ಇವರೇ ಬ್ಯಾಗುಗಳನ್ನು ತಯಾರಿಸುತ್ತಿರುವುದು ವಿಶೇಷ. ವಿವಿಧ ದೇಶಗಳಲ್ಲಿ ವಾಸವಿರುವ ಜನ ಇವರ ಬ್ಯಾಗುಗಳನ್ನು ಖರೀದಿ ಮಾಡುತ್ತಿದ್ದಾರೆ.
ಆಸಕ್ತಿ ಮತ್ತು ಇಚ್ಛಾಶಕ್ತಿ ಇದ್ದರೆ ವಯಸ್ಸಿನ ಹಂಗಿಲ್ಲದ ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.