Monday, August 20th, 2018
ಅಂತಾರಾಷ್ಟ್ರೀಯ Admin
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯರು ಪದಕಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಸೋಮವಾರ ಶೂಟರ್ ಲಕ್ಷ್ಯ ಶೋರನ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಪುರುಷರ ಟ್ರ್ಯಾಪ್ ಫೈನಲ್ನಲ್ಲಿ ಅವರು 48 ಟಾರ್ಗೆಟ್ಗಳ ಪೈಕಿ 42 ಟಾರ್ಗೆಟ್ಗಳನ್ನು ಪೂರೈಸಿ ಬೆಳ್ಳಿ ಪದಕವನ್ನು ಪಡೆದುಕೊಂಡರು.