ಹೈದರಾಬಾದ್: ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ನೆರೆಯ ತೆಲಂಗಾಣ ನೆರವಿನ ಹಸ್ತವನ್ನು ಚಾಚಿದೆ. ಅಲ್ಲಿನ ಉಪಮುಖ್ಯಮಂತ್ರಿ ಮೊಹಮ್ಮದ್ ಮಹಮೂದ್ ಅಲಿ ಅವರು ತಮ್ಮ ಒಂದು ತಿಂಗಳ ವೇತನವನ್ನು ದಾನ ಮಾಡಿದ್ದಾರೆ.
ಅಲ್ಲಿನ ಗೃಹ ಸಚಿವ ನಯನಿ ನರಸಿಂಹ ರೆಡ್ಡಿಯವರು ರೂ.25 ಕೋಟಿಗಳ ಚೆಕ್ನ್ನು ಕೇರಳ ಸಿಎಂ ಪಿನರಾಯಿ ವಿಜಯನ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಇದೆಲ್ಲಕ್ಕಿಂತಲೂ ಹೆಚ್ಚಾಗಿ ತೆಲಂಗಾಣ ಆಡಳಿತ ಕುಡಿಯುವ ನೀರು ಪೂರೈಕೆ ಮಾಡುವುದಕ್ಕಾಗಿ ಸುಮಾರು ರೂ.2.5 ಕೋಟಿ ಮೌಲ್ಯದ 50 ಆರ್ಓ ಮೆಶಿನ್ಗಳನ್ನು ಬಗುಂಪೇಟ್ನಿಂದ ಕೇರಳಕ್ಕೆ ಏರ್ಲಿಫ್ಟ್ ಮಾಡಿದ್ದಾರೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದಲೂ ಕೇರಳಕ್ಕೆ ನೆರವು ಹರಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.