ತಿರುವನಂತಪುರ: ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಕೇರಳದೊಂದಿಗೆ ಇಡೀ ದೇಶವೇ ನಿಂತಿದೆ. ವಿವಿಧ ರಾಜ್ಯ ಸರ್ಕಾರಗಳು ಕೋಟಿ ಕೋಟಿ ಹಣಕಾಸು ನೆರವನ್ನು ಘೋಷಣೆ ಮಾಡಿವೆ. ದೇಶದ ಮೂಲೆ ಮೂಲೆಯ ಜನರು ತಮ್ಮಿಂದಾದ ನೆರವನ್ನು ಕೇರಳ ಜನತೆಗೆ ನೀಡುತ್ತಿದ್ದಾರೆ.
ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರ ಸರ್ಕಾರ ರೂ.10 ಕೋಟಿಗಳ ನೆರವನ್ನು ಕೇರಳಕ್ಕೆ ಘೋಷಣೆ ಮಾಡಿದೆ.
ಮಹಾರಾಷ್ಟ್ರ ಸರ್ಕಾರ ರೂ.20 ಕೋಟಿಗಳ ನೆರವನ್ನು ಕೇರಳಕ್ಕೆ ಘೋಷಣೆ ಮಾಡಿದೆ.
ಕರ್ನಾಟಕ ಸರ್ಕಾರ ಈಗಾಗಲೇ ರೂ.10 ಕೋಟಿ ಘೋಷಣೆ ಮಾಡಿದೆ.
ದೆಹಲಿ ಸರ್ಕಾರ 10 ಕೋಟಿ ರೂಪಾಯಿ ಘೋಷಣೆ ಮಾಡಿದೆ ಮತ್ತು ಎಎಪಿ ಶಾಸಕರು ಮತ್ತು ಸಂಸದರು 1 ತಿಂಗಳ ವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಝಾರ್ಖಂಡ್ ಸರ್ಕಾರ 5 ಕೋಟಿ ರೂಪಾಯಿಗಳ ನೆರವು ನೀಡಿದರೆ, ಹರಿಯಾಣ ರೂ.10 ಕೋಟಿ ಘೋಷಣೆ ಮಾಡಿದೆ.
ಬಿಹಾರ ಸರ್ಕಾರ ರೂ.10 ಕೋಟಿಗಳನ್ನು ಸಿಎಂ ಪರಿಹಾರ ನಿಧಿಗೆ ಘೋಷಣೆ ಮಾಡಿದ್ದಾರೆ.
ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ 5 ಕೋಟಿಗಳ ನೆರವನ್ನು ಕೇರಳ ಸಿಎಂ ಪರಿಹಾರ ನಿಧಿಗೆ ಘೋಷಣೆ ಮಾಡಿದ್ದಾರೆ ಮತ್ತು 245 ಅಗ್ನಿಶಾಮಕ ಸಿಬ್ಬಂದಿಗಳನ್ನು , ದೋಣಿಗಳನ್ನು ಕಳುಹಿಸಿಕೊಟ್ಟಿದೆ.
ತಮಿಳುನಾಡು ರೂ.5 ಕೋಟಿ ಮತ್ತು ಪರಿಹಾರ ಸಾಮಾಗ್ರಿಗಳನ್ನು, ವೈದ್ಯಕೀಯ ತಂಡಗಳನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.