ವಿಶ್ವಸಂಸ್ಥೆ: ಕೇರಳದಲ್ಲಿ ನೆರೆಯಿಂದ ಉಂಟಾದ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟಗಳಿಗೆ ಶೋಕ ವ್ಯಕ್ತಪಡಿಸುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ರೆಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕೇರಳ ಪ್ರವಾಹದಿಂದ ಉಂಟಾದ ಅನಾಹುತಗಳಿಗೆ ಬೇಸರಿಸುತ್ತೇವೆ ಮತ್ತು ನಾವು ಅಲ್ಲಿನ ಸ್ಥಿತಿಗತಿಯನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದೇವೆ, 100 ವರ್ಷಗಳಲ್ಲೇ ಇದು ಕೇರಳದಲ್ಲಿನ ಅತ್ಯಂತ ಕೆಟ್ಟ ಪ್ರವಾಹ’ ಎಂದು ಅವರು ತಿಳಿಸಿದ್ದಾರೆ.
ಭಾರತ ಪ್ರವಾಹಕ್ಕೆ ವಿಶ್ವಸಂಸ್ಥೆಯ ನೆರವನ್ನು ಇದುವರೆಗೆ ಯಾಚನೆ ಮಾಡಿಲ್ಲ ಎಂದು ಯುಎನ್ ಪ್ರಧಾನ ಕಾರ್ಯದರ್ಸಿ ವಕ್ತಾರ ಸ್ಟೀಫನ್ ದುಜರ್ರಿಕ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಭಾರತ ನೆರೆ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.