ಲಕ್ನೋ: ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉತ್ತರಪ್ರದೇಶದಲ್ಲಿ ಎಲ್ಲಾ ನದಿಗಳಲ್ಲೂ ವಿಸರ್ಜನೆ ಮಾಡಲು ಯುಪಿ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಟ್ವಿಟರ್ ಮೂಲಕ ಯುಪಿ ಸರ್ಕಾರ ಮಾಹಿತಿಯನ್ನು ನೀಡಿದ್ದು, ವಾಜಪೇಯಿ ಅವರ ಚಿತಾಭಸ್ಮ ರಾಜ್ಯದಲ್ಲಿನ ಎಲ್ಲಾ ನದಿಗಳಲ್ಲೂ ವಿಸರ್ಜನೆಗೊಳ್ಳಲಿದೆ ಎಂದಿದೆ.
ಉತ್ತರಪ್ರದೇಶದಲ್ಲಿ ಗಂಗಾ, ಯಮುನಾ, ತಾಪ್ತಿ, ಗೋಮತಿ, ವರುಣಾ, ಸಿಂಧು ಸೇರಿದಂತೆ ಅನೇಕ ನದಿಗಳಿವೆ. ಈ ಎಲ್ಲಾ ನದಿಗಳಲ್ಲೂ ವಾಜಪೇಯಿಯವರ ಚಿತಾಭಸ್ಮವನ್ನು ವಿಸರ್ಜನೆಗೊಳಿಸಲಾಗುತ್ತಿದೆ.
ಶುಕ್ರವಾರ ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.