ನವದೆಹಲಿ: ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನದ ಸುದ್ದಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು, ವಾಜಪೇಯಿ ಅವರ ದೂರದೃಷ್ಟಿತ್ವ ಉಭಯ ದೇಶಗಳ ಸಹಕಾರ ವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ.
ವಾಜಪೇಯಿಯವರು ಭಾರತ ಮತ್ತು ಅಮೆರಿಕಾದ ನಡುವಣ ಬಾಂಧವ್ಯವನ್ನು ಸಮಾನ ಮೌಲ್ಯಗಳ ನೈಸರ್ಗಿಕ ಪಾಲುದಾರಿತ್ವ ಎಂದು ಬಣ್ಣಿಸಿದ್ದರು ಎಂಬುದನ್ನು ಅವರು ಪಾಂಪಿಯೋ ಸ್ಮರಿಸಿದ್ದಾರೆ.
‘ಭಾರತ ಮತ್ತು ಅಮೆರಿಕಾ ದೇಶಗಳು ತಮ್ಮ ಸಮಾನ ಪ್ರಜಾತಂತ್ರ ಮೌಲ್ಯಗಳಿಂದ ಉತ್ತಮ ಪಾಲುದಾರಿತ್ವವನ್ನು ಹೊಂದಬಲ್ಲವು ಎಂಬುದನ್ನು ವಾಜಪೇಯಿ ಅತಿ ಬೇಗ ಮನಗಂಡರು. ಉಭಯ ದೇಶಗಳ ಪಾಲುದಾರಿತ್ವದ ಕೊಡುಗೆಯಾಗಿ ಆರ್ಥಿಕ ಸಮೃದ್ಧಿ ಮತ್ತು ಪ್ರಾದೇಶಿಕ ಹಾಗೂ ವಿಶ್ವ ಭದ್ರತೆಯ ವೃದ್ಧಿಯಾಗಬಹುದು ಎಂದು ಅವರು ನಂಬಿದ್ದರು’ ಎಂದಿದ್ದಾರೆ.
2000ನೇ ಇಸವಿಯಲ್ಲಿ ಯುಎಸ್ ಕಾಂಗ್ರೆಸ್ನಲ್ಲಿ ವಾಜಪೇಯಿ ಮಾಡಿದ ಭಾಷಣವನ್ನು ಸ್ಮರಿಸಿದ ಅವರು, ಭಾರತದ ಅಭಿವೃದ್ಧಿಯನ್ನು ಅವರು ಪ್ರತಿಪಾದಿಸಿದ್ದರು ಎಂದಿದ್ದಾರೆ.
‘ಭಾರತ ಜಾಗತಿಕ ಮತ್ತು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಕಾರಣವಾದ ವಾಜಪೇಯಿಯವರ ಕೊಡುಗೆಗಳನ್ನು ಅಪಾರ ಭಾರತೀಯರು ಪ್ರತಿಬಿಂಬಿಸುತ್ತಿದ್ದಾರೆ, ವಾಜಪೇಯಿ ದೇಶದ ಅಭಿವೃದ್ಧಿಗಾಗಿ ದಣಿವರಿಯದೆ ದುಡಿದಿದ್ದಾರೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.