ತಿರುವನಂತಪುರಂ: ಮಹಾಮಳೆಗೆ ತತ್ತರಿಸಿ ಹೋಗಿರುವ ಕೇರಳದಲ್ಲಿ ಜನಜೀವನ ಅಕ್ಷರಶಃ ಅಸ್ತವ್ಯಸ್ಥಗೊಂಡಿದೆ. ತಿನ್ನಲು ಆಹಾರ, ಕುಡಿಯಲು ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿಯ ಈ ಕಠೋರ ಮುನಿಸಿನ ನಡುವೆಯೂ ಅಲ್ಲಲ್ಲಿ ಮಾನವೀಯತೆಯ ದರ್ಶನವಾಗಿದೆ.
ಮಹಾರಾಷ್ಟ್ರದ ಬಡ ಹೊದಿಕೆ ವ್ಯಾಪಾರಿಯೊಬ್ಬರು ತಾವು ಮಾರಾಟಕ್ಕೆ ತಂದಿದ್ದ ಎಲ್ಲಾ 50 ಹೊದಿಕೆಗಳನ್ನು ಕೇರಳದ ಜನರಿಗೆ ದಾನ ಮಾಡಿದ್ದಾರೆ. ಈ ಮೂಲಕ ಬಡತನದಲ್ಲೂ ತಮ್ಮ ಒಂದಿಷ್ಟು ಆದಾಯವನ್ನು ಪರೋಪಕಾರಕ್ಕಾಗಿ ಬಳಸಿಕೊಂಡಿದ್ದಾರೆ.
ವಿಷ್ಣು 50 ಹೊದಿಕೆಗಳನ್ನು ಹೊತ್ತು ಕೇರಳಕ್ಕೆ ಮಾರಾಟ ಮಾಡುವುದಕ್ಕಾಗಿ ಬಂದಿದ್ದರು, ಆದರೆ ಇಲ್ಲಿನ ನೆರೆ ಪರಿಸ್ಥಿತಿಯನ್ನು ಕಂಡು ಅವರು ಮರು ಚಿಂತನೆ ಮಾಡದೆ ತಮ್ಮಲ್ಲಿದ್ದ ಎಲ್ಲಾ ಹೊದಿಕೆಗಳನ್ನು ಜಿಲ್ಲಾಧಿಕಾರಿ ಮುಖೇನ ಜನರಿಗೆ ದಾನ ಮಾಡಿದ್ದಾರೆ.
ಉಳ್ಳವರು ದಾನ ಮಾಡುವುದರಲ್ಲಿ ಯಾವ ವಿಶೇಷವೂ ಇರುವುದಿಲ್ಲ, ಆದರೆ ಒಪ್ಪೋತ್ತಿನ ಊಟವನ್ನು ತೊರೆದು ಬರಿಹೊಟ್ಟೆಯಲ್ಲಿ ಪರೋಪಕಾರ ಮಾಡುವವರು ಮಹನೀಯರಾಗಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.