ತಿರುವನಂತಪುರಂ: ನೆರೆ ಪೀಡಿತ ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಕಾರ್ಯಕ್ಕಾಗಿ ಭಾರತೀಯ ನೌಕಾಪಡೆಯು ‘ಆಪರೇಶನ್ ಮದದ್’ನ್ನು ಆರಂಭಿಸಿದೆ.
ವಾಯಾನಾಡ್ ಡೆಪ್ಯುಟಿ ಕಲೆಕ್ಟರ್ ಅವರ ಮನವಿಯ ಮೇರೆಗೆ ಜೆಮಿನಿ ಇನ್ಪ್ಲೆಟೆಬಲ್ ಬೋಟ್ ಮೂಲಕ ಡೈವಿಂಗ್ ಟೀಮ್ನ್ನು ಏರ್ಲಿಫ್ಟ್ ಮಾಡಲಾಗಿದ್ದು ಕಲ್ಪೆಟಾಗೆ ರಕ್ಷಣಾ ಕಾರ್ಯಾಚರಣೆ ಮಾಡಲು ಕಳುಹಿಸಿಕೊಡಲಾಗಿದೆ ಎಂದು ನೌಕಾ ವಕ್ತಾರರು ತಿಳಿಸಿದ್ದಾರೆ.
ವಿವಿಧ ಹಡಗುಗಳ ಮೂಲಕ ನೌಕಾ ಸಿಬ್ಬಂದಿ ನೆರೆಯಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಇದುವರೆಗೆ ಕೇರಳದಲ್ಲಿ ನೆರೆ ಪರಿಸ್ಥಿತಿಯಿಂದಾಗಿ 29 ಜನರು ಸಾವನ್ನಪ್ಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.