×
Home About Us Advertise With s Contact Us

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯ ಬಿಜೆಪಿ ನಾಯಕರ ಪ್ರವಾಸ ಪ್ರಾರಂಭ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ನಾಯಕರು ಇಂದಿನಿಂದ  ಆಗಸ್ಟ್ 16 ರ ವರೆಗೆ ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸಲಿದ್ದಾರೆ.

ಮೂರು ತಂಡಗಳಲ್ಲಿ ರಾಜ್ಯ ನಾಯಕರು ಪ್ರವಾಸವನ್ನು ಆರಂಭಿಸಲಿದ್ದು, ಬಿಜೆಪಿ ರಾಜ್ಯ ನಾಯಕರುಗಳಾದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿಗಳಾದ  ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  ಇವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಪ್ರಾರಂಭವಾಗಲಿದೆ.

ಪ್ರವಾಸದ ವೇಳೆ ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲೆಯ ಸಮಸ್ಯೆಗಳು, ಸಂಘಟನಾತ್ಮಕ ಸ್ಥಿತಿಗತಿಗಳ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ ಜಿಲ್ಲಾ ಶಕ್ತಿ ಕೆಂದ್ರದ ಪ್ರಮುಖರ ಮೇಲ್ಪಟ್ಟವರ ಸಭೆ ಕೂಡಾ ನಡೆಯಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿದೆ.

ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ತಂಡ ಬೀದರ್‌ನಿಂದ, ಶೆಟ್ಟರ್ ತಂಡ ಶಿವಮೊಗ್ಗದಿಂದ ಮತ್ತು ಈಶ್ವರಪ್ಪ ತಂಡ ಮಂಡ್ಯದಿಂದ ಪ್ರವಾಸ ಆರಂಭಿಸಲಿದೆ. ಆಗಸ್ಟ್ 16 ರ ವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು.

 

Recent News

Back To Top
error: Content is protected !!