ಗಾಂಧಿನಗರ: ಮಹಿಳಾ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಗುಜರಾತ್ನಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ‘181 ಅಭಯಂ’ನ್ನು ಆರಂಭಿಸಲಾಗಿದೆ.
‘181 ಅಭಯಂ’ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿವಿಕೆ-ಇಎಂಆರ್ಐನ ಸಹಯೋಗದೊಂದಿಗೆ ಇದನ್ನು ವಿನ್ಯಾಸಪಡಿಸಿದೆ.
ಮುಖ್ಯಮಂತ್ರಿ ವಿಜಯ್ ರೂಪಾಣಿಯವರು ‘181 ಅಭಯಂ’ಗೆ ಚಾಲನೆ ನೀಡಿದ್ದು, ಮಹಿಳಾ ಸುರಕ್ಷತೆಯೆಡೆಗೆ ಇಟ್ಟ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಈ ಅಪ್ಲಿಕೇಶನ್ ಬಳಸಿ ಅಪಾಯದಲ್ಲಿರುವ ಮಹಿಳೆಯರು ತಮ್ಮ ಮೊಬೈಲ್ ಶೇಕ್ ಮಾಡುವ ಮೂಲಕ ಅಥವಾ ಪ್ಯಾನಿಕ್ ಬಟನ್ ಪ್ರೆಸ್ ಮಾಡುವ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಅಪರಾಧಿಗಳ ಫೋಟೋ ಅಥವಾ ವೀಡಿಯೋಗಳನ್ನು ಪೊಲೀಸರಿಗೆ ಇದರ ಮೂಲಕ ಕಳುಹಿಸಿಕೊಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.