ನವದೆಹಲಿ: ಇಂಟರ್ನೆಟ್ ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದೆ. ಡಿಜಟಲೀಕರಣದತ್ತ ದೇಶವನ್ನು ಕೊಂಡೊಯ್ಯುವಲ್ಲಿ ಇದರ ಮಾತ್ರ ಅಗ್ರಗಣ್ಯ. ಆದರೂ ನಮ್ಮ ದೇಶದ ಬಹುಪಾಲು ಜನ ಇಂಟರ್ನೆಟ್ ಬಳಕೆಯಿಂದ ದೂರವೇ ಉಳಿದಿದ್ದಾರೆ ಎನ್ನುವುದು ವಿಷಾದನೀಯ.
15-65 ವಯೋಮಾನದ ಕೇವಲ ಶೇ.19ರಷ್ಟು ಮಂದಿ ಮಾತ್ರ ಭಾರತದಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ ಎಂಬುದಾಗಿ ‘AfterAccess: ICT access and use in India and the Global South’ ಅಧ್ಯಯನ ಹೇಳಿದೆ.
ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಲಿರ್ನೇಶಿಯಾ ಎಂಬ ಪಾಲಿಸಿ ಮತ್ತು ರೆಗ್ಯುಲೇಶನ್ ಥಿಂಕ್ ಟ್ಯಾಂಕ್ ಈ ಅಧ್ಯಯನವನ್ನು ನಡೆಸಿದೆ.
’ಇಂಟರ್ನೆಟ್ ಬಗೆಗಿನ ಅರಿವಿನ ಕೊರತೆ ಭಾರತದ ದೊಡ್ಡ ಸಮಸ್ಯೆಯಾಗಿದೆ, 15-65 ವಯೋಮಾನದ ಶೇ.35ರಷ್ಟು ಮಂದಿಗೆ ಮಾತ್ರ ಇಂಟರ್ನೆಟ್ ಎಂದರೇನು ಎಂದು ತಿಳಿದಿದೆ. ಆದರೆ ಬಳಕೆ ಇದಕ್ಕಿಂತಲೂ ಕಡಿಮೆ ಇದ್ದು, ಕೇವಲ ಶೇ.19ರಷ್ಟು ಮಂದಿ ಬಳಸುತ್ತಿದ್ದಾರೆ’ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.