ನವದೆಹಲಿ: ಭಾರತೀಯ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಅವರ 78ನೇ ಜನ್ಮದಿನವನ್ನು ಗೂಗಲ್ ಸುಂದರವಾದ ಡೂಡಲ್ ಮೂಲಕ ಸಂಭ್ರಮಿಸಿದೆ.
ಸ್ಪಿನ್ ಬಾಲ್ಗಳ ವಿರುದ್ಧ ಬ್ಯಾಟ್ ಬೀಸುವ ಅತ್ಯುತ್ತಮ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಸರ್ದೇಸಾಯಿ ಅವರು ಪಾತ್ರರಾಗಿದ್ದರು, 1959-60ನೇ ಇಸವಿಯಲ್ಲಿ ಇಂಟರ್ ಯೂನಿವರ್ಸಿಟಿ ರೊಹಿಂಟನ್ ಬರಿಯ ಟ್ರೋಫಿ ಮೂಲದ ಕ್ರಿಕೆಟ್ಗೆ ಇವರು ಪಾದಾರ್ಪಣೆ ಮಾಡಿದ್ದು, ಇಲ್ಲಿ 435 ರನ್ಗಳನ್ನು ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
2007ರ ಜುಲೈ 2ರಂದು ಇವರು ಅನಾರೋಗ್ಯದಿಂದಾಗಿ ನಿಧನವನ್ನು ಹೊಂದಿದರು. ಈ ಮಹಾನ್ ಕ್ರಿಕೆಟಿಗನ ಜನ್ಮದಿನದ ಪ್ರಯುಕ್ತ ಗೂಗಲ್ ತನ್ನ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.