ನವದೆಹಲಿ: ದೇಶದಾದ್ಯಂತ ಇದ್ದ 39 ಮಿಲಿಟರಿ ಫಾರ್ಮ್ಗಳನ್ನು ಸ್ಥಗಿತಗೊಳಿಸುವಂತೆ ಕಳೆದ ವರ್ಷ ರಕ್ಷಣಾ ಸಚಿವಾಲಯ ಆದೇಶ ನೀಡಿತ್ತು. ಈ ಫಾರ್ಮ್ಗಳಲ್ಲಿದ್ದ ಗೋವುಗಳನ್ನು ಸರ್ಕಾರಿ ಇಲಾಖೆ ಅಥವಾ ಡೈರಿ ಸಹಕಾರಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ಗೋವಿಗೆ ತಲಾ ರೂ.1000ರಂತೆ ದರ ನಿಗದಿಪಡಿಸಲಾಗಿದೆ
ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು ರಾಜ್ಯಸಭೆಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಮಿಲಿಟರಿ ಫಾರ್ಮ್ಗಳಲ್ಲಿರುವ ಗೋವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲಾಖೆ ಅಥವಾ ಡೈರಿ ಸಹಕಾರಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ತಲಾ ಒಂದು ಗೋವಿಗೆ ರೂ.1,000ರಂತೆ ವರ್ಗಾವಣೆ ಮಾಡಲಾಗುತ್ತಿದೆ ಎಂದಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ರಕ್ಷಣಾ ಸಚಿವಾಲಯ ಹಲವಾರು ಸುಧಾರಣಾ ಕ್ರಮಗಳನ್ನು ಘೋಷಣೆ ಮಾಡಿತ್ತು, ಅದರಲ್ಲಿ ಮಿಲಿಟರಿ ಫಾರ್ಮ್ಗಳ ಸ್ಥಗಿತ ಕೂಡ ಒಂದಾಗಿತ್ತು.
ದೇಶದಾದ್ಯಂತದ ರಕ್ಷಣಾ ಭೂಮಿಯ ಸುಮಾರು 20 ಸಾವಿರ ಎಕರೆಗಳಲ್ಲಿ ಮಿಲಿಟರಿ ಫಾರ್ಮ್ಗಳಿದ್ದವು, ಇದರ ನಿರ್ವಹಣೆಗೆ ಸೇನೆ ರೂ.300 ಕೋಟಿಯನ್ನು ವಾರ್ಷಿಕವಾಗಿ ವ್ಯಯಿಸುತ್ತಿತ್ತು.
ಬ್ರಿಟಿಷರು ಮಿಲಿಟರಿಗೆ ಹಾಲು ಪೂರೈಕೆ ಮಾಡುವ ಉದ್ದೇಶದಿಂದ ಇದನ್ನು ಸ್ಥಾಪನೆ ಮಾಡಿದ್ದರು. ಇದರ ಸ್ಥಗಿತಕ್ಕೆ ಆದೇಶಿಸುವ ಮೂಲಕ ಅನಗತ್ಯ ವೆಚ್ಚವನ್ನು ಕಡಿತಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.