ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೋಮವಾರ, ವಿಶ್ವದ ಮೊತ್ತ ಮೊದಲ ಹೈ ಎನರ್ಜಿ ಸ್ಟೋರೇಜ್ ಡಿವೈಸ್ನ್ನು ಅಮರಾವತಿಯಲ್ಲಿ ಲೋಕಾರ್ಪಣೆಗೊಳಿಸಿದರು.
ಈ ಥರ್ಮಲ್ ಬ್ಯಾಟರಿ ಆಧಾರಿತ ವಿಶ್ವದ ಮೊದಲ ಡಿವೈಸ್ ಇದಾಗಿದ್ದು, ಈ ಕ್ರಾಂತಿಕಾರಕ ತಂತ್ರಜ್ಞಾನದ ಪೆಟೆಂಟ್ನ್ನು ಭಾರತದಲ್ಲಿ 2016ರಲ್ಲಿ ಡಾ.ಪ್ಯಾಟ್ರಿಕ್ ಪಡೆದುಕೊಂಡಿದ್ದಾರೆ.
ಭಾರತ್ ಎನರ್ಜಿ ಸ್ಟೋರೇಜ್ ಟೆಕ್ನಾಲಜಿ ಪ್ರೈ ಲಿ ಇದನ್ನು ತಯಾರಿಸಿದ್ದು, ಎನರ್ಜಿ ಉತ್ಪಾದನೆಯಲ್ಲಿನ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಉತ್ತೇಜಿಸುತ್ತದೆ.
ಈ ಬ್ಯಾಟರಿಗಳ ಉತ್ಪಾದನೆಗಾಗಿ ಭಾರತ್ ಎನರ್ಜಿ ಸ್ಟೋರೇಜ್ ಟೆಕ್ನಾಲಜಿ ಪ್ರೈ ಲಿ ಆಂಧ್ರದಲ್ಲಿ ಗ್ರೀನ್ಫೀಲ್ಡ್ ಫೆಸಿಲಿಟಿ ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕಾಗಿ ರೂ.660 ಕೋಟಿ ಹೂಡಿಕೆ ಮಾಡಲಿದೆ, 3 ಸಾವಿರ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.