ನವದೆಹಲಿ: ಬಿಜೆಪಿಯ ‘ಸಂಪರ್ಕ್ ಸೆ ಸಮರ್ಥನ್’ನ ಭಾಗವಾಗಿ ಅದರ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಭಾನುವಾರ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರನ್ನು ಭೇಟಿಯಾಗಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಶಾ, ‘ಸಂಪರ್ಕ್ ಸೆ ಸಮರ್ಥನ್ ಭಾಗವಾಗಿ ವಿಶ್ವ ಕ್ರಿಕೆಟ್ನ ಅದ್ಭುತ ಫಿನಿಶರ್ ಎಂಎಸ್ ಧೋನಿ ಅವರನ್ನು ಭೇಟಿ ಮಾಡಿದೆ, ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ 4 ವರ್ಷದಿಂದ ಮಾಡಿದ ಸಾಧನೆಗಳ, ಯೋಜನೆಗಳ ಬಗ್ಗೆ ಮಾಹಿತಿ ನೀಡಿದೆ’ ಎಂದಿದ್ದಾರೆ.
ವಿತ್ತ ಸಚಿವ ಪಿಯೂಶ್ ಗೋಯಲ್, ಪಕ್ಷದ ಇತರ ಸದಸ್ಯರೊಂದಿಗೆ ಅವರು ಧೋನಿಯನ್ನು ಭೇಟಿ ಮಾಡಿದರು. ಈ ಹಿಂದೆಯೂ ಅವರು ಕಾರ್ಯಕ್ರಮದ ಭಾಗವಾಗಿ ಹಲವಾರು ಸೆಲೆಬ್ರಿಟಿಗಳನ್ನು ಭೇಟಿಯಾಗಿದ್ದಾರೆ.
ಬಿಜೆಪಿ ಸುಮಾರು 4 ಸಾವಿರ ಪದಾಧಿಕಾರಿಗಳು 1 ಲಕ್ಷ ಗಣ್ಯರನ್ನು ಭೇಟಿಯಾಗಿ ಸರ್ಕಾರ ಕಾರ್ಯಕ್ರಮಗಳ ಬಗ್ಗೆ ಅವರಿಗೆ ವಿವರಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.