ಹೌಸ್ಟನ್: ಅಮೆರಿಕಾದ ಮೊತ್ತ ಮೊದಲ ವಾಣಿಜ್ಯ ಮಾನವ ಬಾಹ್ಯಾಕಾಶ ಹಾರಾಟ ಯೋಜನೆಗೆ 9 ಮಂದಿ ಗಗನಯಾತ್ರಿಗಳ ತಂಡವನ್ನು ನಾಸಾ ಸಿದ್ಧಪಡಿಸಿದ್ದು, ಭಾರತೀಯ ಸಂಜಾತೆ ಸುನಿತಾ ವಿಲಿಯಮ್ಸ್ ಕೂಡ ಈ ತಂಡದಲ್ಲಿದ್ದಾರೆ.
ಅನೇಕ ವರ್ಷಗಳ ವಾಹಕ ಅಭಿವೃದ್ಧಿ ಮತ್ತು ನಿರೀಕ್ಷೆ ನಿರ್ಮಾಣಗಳ ಬಳಿಕ ನಾಸಾ ಖಾಸಗಿ ಬಾಹ್ಯಾಕಾಶ ನೌಕೆಯಲ್ಲಿ ತನ್ನ ಸಿಬ್ಬಂದಿಯನ್ನು ಇರಿಸಲು ಮುಂದಾಗಿದೆ.
ಬೋಯಿಂಗ್ ಸಂಸ್ಥೆ ಮತ್ತು ಸ್ಪೇಸ್ ಎಕ್ಸ್ ನಿರ್ಮಿಸಿದ ಮತ್ತು ನಿರ್ವಹಿಸುವ ಹೊಸ ವಾಣಿಜ್ಯ ಗಗನನೌಕೆ 9 ಗಗನಯಾತ್ರಿಕರನ್ನು ಹೊತ್ತು ಪರೀಕ್ಷಾ ಹಾರಾಟ ನಡೆಸಲಿದೆ ಎಂದು ನಾಸಾ ಘೋಷಣೆ ಮಾಡಿದೆ.
2019ರ ಆರಂಭದಲ್ಲೇ ನಾಸಾದ 8 ಸಕ್ರಿಯ ಗಗನಯಾತ್ರಿಕರು ಮತ್ತು ಒರ್ವ ಮಾಜಿ ಗಗನಯಾತ್ರಿ ಮತ್ತು ಕಾರ್ಪೋರೇಟ್ ಸಿಬ್ಬಂದಿ ಬೋಯಿಂಗ್ ಸಿಎಸ್ಟಿ-100 ಸ್ಟಾರ್ಲೈನರ್ ಆಂಡ್ ಸ್ಪೇಸ್ಎಕ್ಸ್ ಡ್ರ್ಯಾಗೊನ್ಕ್ಯಾಪ್ಸುಲ್ಸ್ ಮೂಲಕ ಇಂಟರ್ನ್ಯಾಷನಲ್ ಸ್ಪೇಸ್ ಪ್ಯಾಡ್ನಿಂದ ಹಾರಾಟ ನಡೆಸಲಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.