ಮುಂಬಯಿ: ಪರಿಸರವನ್ನು ಸುರಕ್ಷಿತವಾಗಿಡುವ ಸಲುವಾಗಿ ಮುಂಬಯಿಯ ಕಲಾವಿದರು ಗಣೇಶನ ಮೂರ್ತಿಯ ತಯಾರಿಕೆಯಲ್ಲಿ ಪರಿಸರ ಸ್ನೇಹಿ ಮಾರ್ಗವನ್ನು ಅನುಸರಿಸುತ್ತಿದ್ದಾರೆ.
ಗಣೇಶ ಚತುರ್ಥಿ ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ, ಕಲಾವಿದರು ಬಣ್ಣ ಬಣ್ಣದ ಆಕರ್ಷಕ ಗಣಪನ ಮೂರ್ತಿಯ ತಯಾರಿಕೆಯಲ್ಲಿ ತಲ್ಲೀಣರಾಗಿದ್ದಾರೆ. ಆದರೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಗಣಪನನ್ನು ತಯರಿಸುವತ್ತ ಇವರು ಚಿತ್ತ ಹರಿಸಿರುವುದು ವಿಶೇಷ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪನಿಗೆ ವಿದಾಯ ಹೇಳಿ, ಮಣ್ಣಿನ ಮೂಲಕ ಗಣಪನನ್ನು ರಚಿಸುತ್ತಿದ್ದಾರೆ. ನೈಸರ್ಗಿಕವಾದ ಬಣ್ಣಗಳನ್ನೇ ಮೂರ್ತಿಗೆ ಬಳಿಯುತ್ತಿದ್ದಾರೆ.
ದತ್ತಾದ್ರಿ ಕೊತುರ್ ಎಂಬ ಕಲಾವಿದರೊಬ್ಬರು ಆವೆ ಮಣ್ಣಿನಲ್ಲಿ ಗಣಪನನ್ನು ರಚಿಸಿ, ಅದರೊಳಗೆ ಮರದ ಬೀಜಗಳನ್ನು ಇಡುತ್ತಿದ್ದಾರೆ. ಹಬ್ಬ ಮುಗಿದ ಬಳಿಕ ಗಣಪನ ಮೂರ್ತಿಯನ್ನು ನೆಲದ ಮೇಲಿಟ್ಟು ದಿನವು ನೀರುಣಿಸಿದರೆ ಅದರಲ್ಲಿ ಗಿಡ ಬೆಳೆಯುತ್ತದೆ. ಗಣಪನನ್ನು ನೀರಿನಲ್ಲಿ ಬಿಟ್ಟು ವಿದಾಯ ಹೇಳುವುದಕ್ಕಿಂತ ಆತನನ್ನು ಮರವಾಗಿ ಕಾಣುವುದು ಹೆಚ್ಚು ಸುಂದರವಲ್ಲವೇ?
ರೋಹಿತ್ ವಾಸ್ತೆ ಎಂಬ ಕಲಾವಿದ ಕಾಗದದಿಂದ ಗಣಪನನ್ನು ರಚಿಸುತ್ತಿದ್ದಾರೆ, ಹಬ್ಬ ಮುಗಿದ ಬಳಿಕ ಇದನ್ನು ಮರುಬಳಕೆ ಮಾಡಬಹುದು ಎಂಬುದು ಅವರ ಯೋಚನೆಯಾಗಿದೆ.
ಈ ಬಾರಿ ಹೆಚ್ಚಿನ ಪೆಂಡಾಲ್ಗಳಲ್ಲಿ ಅಲಂಕಾರಿಕಕ್ಕಾಗಿ ನೈಸರ್ಗಿಕ ವಸ್ತುಗಳನ್ನೇ ಬಳಸಲಾಗುತ್ತಿರುವುದು ವಿಶೇಷವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.