ಶೋಪಿಯಾನ: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಶನಿವಾರ ಬೆಳಿಗ್ಗೆ ಸೇನಾ ಪಡೆಗಳು ನಡೆಸಿದ ಎನ್ಕೌಂಟರ್ಗೆ ನಾಲ್ವರು ಉಗ್ರ ಬಲಿಯಾಗಿದ್ದಾರೆ. ಈ ಮೂಲಕ ನಿನ್ನೆಯಿಂದ ಬಲಿಯಾದ ಉಗ್ರರ ಸಂಖ್ಯೆ 5ಕ್ಕೇರಿದೆ.
ಈ ಭಾಗದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಮುಂದುವರೆಸಿದ್ದು, ಇತರ ಉಗ್ರರಿಗಾಗಿ ಬಲೆ ಬೀಸಿದ್ದಾರೆ.
ಶುಕ್ರವಾರ ಸಂಜೆ ಲಷ್ಕರ್ ಇ ತೋಯ್ಪಾ ಉಗ್ರ ಸಂಘಟನೆಗೆ ಸೇರಿದ ಉಮರ್ ಮಲಿಕ್ಂಬ ಉಗ್ರನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಈತನ ಬಳಿಯಿದ್ದ ಎಕೆ-47 ರೈಫಲ್ನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಶನಿವಾರವೂ ಕಾರ್ಯಾಚರಣೆಯನ್ನು ಮುಂದುವರೆಸಿದ ಸೇನೆ ನಾಲ್ವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಹತರಾದ ಉಗ್ರರ ಗುರುತು ಪತ್ತೆ ಇನ್ನಷ್ಟೇ ಆಗಬೇಕಿದೆ.
ಕಳೆದ ಹಲವಾರು ದಿನಗಳಿಂದ ಭದ್ರತಾ ಪಡೆಗಳು ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ, ಈಗಾಗಲೇ ಹಲವು ಉಗ್ರರು ನೆಲಕ್ಕುರುಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.