ನವದೆಹಲಿ: ಭಾರತದೊಳಗೆ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಲುವಾಗಿ ಸುಮಾರು 600 ಉಗ್ರರು ಗಡಿಯಾಚೆ ಕಾದು ಕುಳಿತಿದ್ದಾರೆ, ಸಮಯ ಸಿಕ್ಕಾಗ ಭಾರತದೊಳಗೆ ನುಗ್ಗುವ ಪ್ರಯತ್ನದಲ್ಲಿದ್ದಾರೆ, ಇವರೆಲ್ಲರಿಗೂ ಪಾಕಿಸ್ಥಾನದ ಸಹಾಯವಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ.
ಈ ಉಗ್ರರಿಗೆ ಪಾಕಿಸ್ಥಾನ ಸೇನಾ ಪಡೆಯ ಸಕ್ರಿಯ ಬೆಂಬಲವಿದೆ ಮತ್ತು ಸೇನಾ ಸಿಬ್ಬಂದಿಗಳು ಕೂಡ ಈ ಉಗ್ರರ ಪೈಕಿ ಇದ್ದಾರೆ ಎಂಬ ಗುಮಾನಿ ಇದೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಈ ಉಗ್ರರು ಪಾಕಿಸ್ಥಾನದ ಬಾರ್ಡರ್ ಆಕ್ಷನ್ ಟೀಮ್ನ ಸದಸ್ಯರಾಗಿದ್ದಾರೆ, ಈ ಟೀಮ್ ಉಗ್ರರಿಗೆ ಬೆಂಬಲ ನೀಡುವ ಸಂಘಟನೆಯಾಗಿದೆ ಎಂದಿದೆ.
ಸರ್ಜಿಕಲ್ ಸ್ಟ್ರೈಕ್ ನಡೆದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಉಗ್ರರು ಭಾರತದೊಳಗೆ ನುಸುಳಲು ಹವಣಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.