ನವದೆಹಲಿ: 5 ಕೋಟಿ ಮನೆಗಳಿಗೆ ಉಚಿತ ಎಲ್ಪಿಜಿ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಉಜ್ವಲ ಯೋಜನೆ’ ಟಾರ್ಗೆಟ್ನ್ನು ಅವಧಿಗೂ ಮುನ್ನವೇ ಸರ್ಕಾರ ಪೂರ್ಣಗೊಳಿಸಿದೆ.
ಶುಕ್ರವಾರ ಸಂಸತ್ತಿನಲ್ಲಿ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಂದ ನಂ.5 ಕೋಟಿ ಎಲ್ಪಿಜಿಯನ್ನು ಫಲಾನುಭವಿಗೆ ಹಸ್ತಾಂತರ ಮಾಡುವ ಮೂಲಕ ಈ ಮಹತ್ವದ ಮೈಲಿಗಲ್ಲನ್ನು ಸರ್ಕಾರ ಸಂಭ್ರಮಿಸಲಿದೆ.
5 ಕೋಟಿಯ ಟಾರ್ಗೆಟ್ನ್ನು ಸರ್ಕಾರ 8 ತಿಂಗಳು ಮುಂಚಿತವಾಗಿಯೇ ತಲುಪಿದ್ದು ಶ್ಲಾಘನೀಯ ಕಾರ್ಯವಾಗಿದೆ. ಸರ್ಕಾರ, ಅಧಿಕಾರಿಗಳ ಶ್ರಮ ಇಲ್ಲಿ ಮಹತ್ವದ ಪಾತ್ರ ವಹಿಸಿದೆ.
ಬಡ ಕುಟುಂಬಗಳಿಗೆ ಕಟ್ಟಿಗೆ ಹೊಗೆಯಿಂದ ಮುಕ್ತಿ ನೀಡುವ ಉದ್ದೇಶದೊಂದಿಗೆ ಆರಂಭಗೊಂಡ ಅತ್ಯಂತ ಮಹತ್ವದ ಯೋಜನೆ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.